ದೇಶ

ಕೇಂದ್ರ ಬಜೆಟ್: ಇವಿಎಂ ಖರೀದಿಗೆ ಸುಮಾರು 1,900 ಕೋಟಿ ರೂ. ನಿಗದಿ

Lingaraj Badiger

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಮುನ್ನ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಖರೀದಿಸಲು ಕೇಂದ್ರ ಕಾನೂನು ಸಚಿವಾಲಯಕ್ಕೆ ಕೇಂದ್ರ ಬಜೆಟ್‌ನಲ್ಲಿ ಸುಮಾರು 1,900 ಕೋಟಿ ರೂ. ನೀಡಲಾಗಿದೆ.

ಇಂದು 2023-24ನೇ ಸಾಲಿನ  ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 
ಚುನಾವಣಾ ಸಮಿತಿಯಿಂದ ಇವಿಎಂ ಖರೀದಿಗೆ 1,891.78 ಕೋಟಿ ರೂ. ನೀಡಲಾಗಿದೆ.

"ಬ್ಯಾಲೆಟ್ ಯೂನಿಟ್‌ಗಳು, ಕಂಟ್ರೋಲ್ ಯೂನಿಟ್‌ಗಳು ಮತ್ತು ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ ಯೂನಿಟ್‌ಗಳು(ಪೇಪರ್‌ಟ್ರೇಲ್ ಮೆಷಿನ್‌ಗಳು) ಮತ್ತು ಇವಿಎಂಗಳ ಮೇಲಿನ ಪೂರಕ ವೆಚ್ಚಗಳು ಹಾಗೂ ಬಳಕೆಯಲ್ಲಿಲ್ಲದ ಇವಿಎಂಗಳನ್ನು ಗುಜರಿಗೆ ಹಾಕುವುದಕ್ಕಾಗಿ ಚುನಾವಣಾ ಆಯೋಗಕ್ಕೆ ಹಣ ಒದಗಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.

SCROLL FOR NEXT