ಸಂಗ್ರಹ ಚಿತ್ರ 
ದೇಶ

ಕೋರ್ಟ್ ಮೂಲಕ ಮಾತ್ರ ಮುಸ್ಲಿಂ ಮಹಿಳೆ ವಿಚ್ಛೇದನಕ್ಕೆ ಅರ್ಹ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

ಮುಸ್ಲಿಂ ಮಹಿಳೆಯರು ಗಂಡಂದಿರಿಗೆ ವಿವಾಹ ವಿಚ್ಛೇದನ ನೀಡಲು ಅನುವು ಕಲ್ಪಿಸಲು ಖುಲಾ ಹಕ್ಕನ್ನು ಕೌಟುಂಬಿಕ ನ್ಯಾಯಾಲಯಗಳ ಮೂಲಕ ಚಲಾಯಿಸಬೇಕು. ಶರಿಯಾ, ಜಮಾತ್ ನಂತಹ ಖಾಸಗಿ ಸಂಘ ಸಂಸ್ಥೆಗಳ ಮೂಲಕವಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಚೆನ್ನೈ: ಮುಸ್ಲಿಂ ಮಹಿಳೆಯರು ಗಂಡಂದಿರಿಗೆ ವಿವಾಹ ವಿಚ್ಛೇದನ ನೀಡಲು ಅನುವು ಕಲ್ಪಿಸಲು ಖುಲಾ ಹಕ್ಕನ್ನು ಕೌಟುಂಬಿಕ ನ್ಯಾಯಾಲಯಗಳ ಮೂಲಕ ಚಲಾಯಿಸಬೇಕು. ಶರಿಯಾ, ಜಮಾತ್ ನಂತಹ ಖಾಸಗಿ ಸಂಘ ಸಂಸ್ಥೆಗಳ ಮೂಲಕವಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

2017ರಲ್ಲಿ ಶರಿಯತ್ ಕೌನ್ಸಿಲ್‌ನಿಂದ ತನ್ನ ಪತ್ನಿ ಪಡೆದಿರುವ ಖುಲಾ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಸಿ. ಶಿವರಾಮನ್ ಅವರ ನೇತೃತ್ವದ ಪೀಠವು ಈ ಆದೇಶ ನೀಡಿದೆ.

ಮುಸ್ಲಿಂ ಪುರುಷರು ಪತ್ನಿಯರಿಗೆ ತಲಾಖ್ ನೀಡುವ ರೀತಿ ಮಹಿಳೆಯರಿಗೂ ಗಂಡಂದಿರಿಗೆ ವಿಚ್ಛೇದನ ನೀಡುವ ಹಕ್ಕಿದೆ. ಇದಕ್ಕೆ ಖುಲಾ ಎಂದು ಹೇಳಲಾಗುತ್ತದೆ.

ಸ್ವಯಂಘೋಷಿತ ಕೋರ್ಟ್ ಆದ ಶರಿಯಾ ಸಂಸ್ಥೆಯೊಂದು ಮಹಿಳೆಯೊಬ್ಬರಿಗೆ 2017ರಲ್ಲಿ ಖುಲಾ ಸರ್ಟಿಫಿಕೇಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಆಕೆಯ ಗಂಡ ಹೈಕೋರ್ಟ್ ಮೊರೆ ಹೋಗಿದ್ದರು.

ಇದರ ವಿಚಾರಣೆ ನಡೆಸಿದ ಹೈಕೋರ್ಟ್, ಖುಲಾ ವಿಚ್ಛೇದನ ನೀಡುವ ಅಧಿಕಾರ ಖಾಸಗಿ ಕೋರ್ಟ್ ಗಳಿಗಿಲ್ಲ. ಮುಸ್ಲಿಂ ವೈಯಕ್ತಿಕ ಕಾನೂನು-1937ರ ಪ್ರಕಾರ ಕೇವಲ ಸರ್ಕಾರಿ ಕೌಟುಂಬಿಕ ನ್ಯಾಯಾಲಯಗಳಿಗೆ ಮಾತ್ರ ಇರುತ್ತದೆ ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 47 ಮಂದಿ ಸಾವು, ಡಜನ್ಗಟ್ಟಲೆ ಕಟ್ಟಡಗಳು ಕುಸಿತ!