ದೇಶ

ಅಮೇರಿಕಾದಲ್ಲಿ ಸೋಂಕಿಗೆ ಕಾರಣವಾದ ಐ ಡ್ರಾಪ್ಸ್ ಉತ್ಪನ್ನ ಸ್ಥಗಿತಗೊಳಿಸಿದ ಚೆನ್ನೈ ಮೂಲದ ಸಂಸ್ಥೆ 

Srinivas Rao BV

ನವದೆಹಲಿ: ಚೆನ್ನೈ ಮೂಲದ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್   ಫಾರ್ಮಾಸ್ಯುಟಿಕಲ್ ಕಂಪನಿ ಅಮೆರಿಕದ ಮಾರುಕಟ್ಟೆಯಿಂದ ಕಣ್ಣಿನ ಡ್ರಾಪ್ಸ್ ನ್ನು ಸ್ಥಗಿತಗೊಳಿಸಿದೆ. 

ಚೆನ್ನೈ ಸಂಸ್ಥೆ ಹೊರತಂದ ಐ ಡ್ರಾಪ್ಸ್ (Eye Drops) ಬ್ಯಾಕ್ಟೀರಿಯಾದಿಂದ ಕಲುಷಿತವಾಗಿರಬಹುದು ಪರಿಣಾಮ ಶಾಶ್ವತವಾಗಿ ಕುರುಡುತನ ಆವರಿಸಬಹುದು, ಈ ಐ ಡ್ರಾಪ್ಸ್ ನಿಂದಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಅಮೇರಿಕಾದ ಆರೋಗ್ಯ ರಕ್ಷಣಾ ಸಂಸ್ಥೆ ಹೇಳಿದ ಬೆನ್ನಲ್ಲೇ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. 

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಮತ್ತು ಸ್ಟೇಟ್ ಡ್ರಗ್ ಕಂಟ್ರೋಲರ್ ತಂಡಗಳು ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಘಟಕಕ್ಕೆ ತೆರಳಿ  ಪರಿಶೀಲಿಸಲಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

ಅಮೇರಿಕಾದ ರ್ರೋಗ ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಕೇಂದ್ರ (ಸಿಡಿಸಿ) ಗ್ಲೋಬಲ್ ಫಾರ್ಮಾ ಹೆಲ್ತ್ ಕೇರ್ ತಯಾರಿಸಿದ ಎಜ್ರಿಕೇರ್ ಆರ್ಟಿಫಿಶಿಯಲ್ ಟಿಯರ್ಸ್ ಐ ಡ್ರಾಪ್ಸ್ ನ್ನು ಹಿಂಪಡೆಯಲಾಗಿದ್ದು, ಈ ಡ್ರಾಪ್ಸ್ ನ ಬಾಟಲಿಗಳನ್ನು ಸಂಸ್ಥೆ ಪರೀಕ್ಷಿಸಲಿದೆ. ಆದರೆ ಅಮೇರಿಕಾದ (FDA) ಈ ಕಂಪನಿ ತಯಾರಿಸಿದ ಉತ್ಪನ್ನಗಳ ಆಮದನ್ನು ನಿರ್ಬಂಧಿಸಲು ಮುಂದಾಗಿದೆ. 

ಐಡ್ರಾಪ್ಸ್ ನಿಂದ ಸ್ಯೂಡೋಮೊನಾಸ್ ಎರುಗಿನೋಸಾ ಎಂಬ ರೋಗ ಹರಡಿದ್ದು, ಒಂದು ಡಜನ್ ರಾಜ್ಯಗಳಲ್ಲಿ ಕನಿಷ್ಠ 55 ಜನರ ಮೇಲೆ ಪರಿಣಾಮ ಬೀರಿದೆ.ಈ ರೋಗದಿಂದ 1 ಸಾವು ಸಂಭವಿಸಿದ್ದು ಈ ಬಗ್ಗೆ ದೇಶಾದ್ಯಂತ ವೈದ್ಯರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

SCROLL FOR NEXT