ದೇಶ

ಕಳ್ಳತನ ಆರೋಪಕ್ಕೆ ಪ್ರತೀಕಾರ: ವೃದ್ಧೆಯನ್ನು ಕೊಂದು ರೇಪ್ ಮಾಡಿದ 16ರ ಅಪ್ರಾಪ್ತ ಬಾಲಕ!

Vishwanath S

ರೇವಾ(ಮಧ್ಯಪ್ರದೇಶ): ನಾಲ್ಕು ದಿನಗಳ ಹಿಂದೆ 58 ವರ್ಷದ ಮಹಿಳೆಯ ಕೊಲೆ ಮತ್ತು ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು 16 ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ. ಎರಡು ವರ್ಷಗಳ ಹಿಂದಿನ ಕಳ್ಳತನ ಆರೋಪಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮಹಿಳೆಯನ್ನು ಕೊಂದಿರುವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಈ ಘಟನೆ ಜನವರಿ 31ರ ರಾತ್ರಿ ಕೈಲಾಸಪುರದಲ್ಲಿ ನಡೆದಿತ್ತು. 16 ವರ್ಷದ ಆರೋಪಿ ರಾತ್ರಿ ಮನೆಗೆ ನುಗ್ಗಿ ಒಂಟಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ. ಆರೋಪಿ ಮಹಿಳೆಯ ಕೈಕಾಲುಗಳನ್ನು ಕಟ್ಟಿ, ಬಾಯಿಗೆ ಸಾಕ್ಸ್ ಮತ್ತು ಎಲೆಗಳನ್ನು ತುಂಬಿದ್ದರು. ನಂತರ ಹಲವೆಡೆ ಕುಡುಗೋಲಿನಿಂದ ಹಲ್ಲೆ ನಡೆಸಿ ಹತ್ಯೆಗೈದ್ದು ಮೃತದೇಹದ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದೇ ಅಲ್ಲದೆ ಖಾಸಗಿ ಅಂಗಕ್ಕೂ ಕೋಲಿನಿಂದ ಗಾಯಗೊಳಿಸಿದ್ದ. ಇದಾದ ಬಳಿಕ ಆರೋಪಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದನು. 

ಘಟನೆ ಬಗ್ಗೆ ಮಾಹಿತಿ ನೀಡಿರುವ ಮೌಗಂಜ್ ಎಎಸ್ಪಿ ವಿವೇಕ್ ಕುಮಾರ್ ಲಾಲ್, ಫೆಬ್ರವರಿ 1ರ ಬೆಳಿಗ್ಗೆ ಘಟನೆಯ ಬಗ್ಗೆ ಮಾಹಿತಿ ಬಂದಿತ್ತು ಎಂದು ಹೇಳಿದರು. ನಂತರ ಹನುಮಾನ ಪೊಲೀಸರು ಕೈಲಾಸಪುರ ಗ್ರಾಮಕ್ಕೆ ಆಗಮಿಸಿದರು. 58 ವರ್ಷದ ಸುಕ್ಬರಿಯಾ ದೇವಿ ಗುಪ್ತಾ ಅವರ  ಮೃತದೇಹವು ಅವರ ಸ್ವಂತ ಮನೆಯ ನಿರ್ಮಾಣ ಹಂತದ ಭಾಗದಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಕೈಕಾಲು ಕಟ್ಟಲಾಗಿತ್ತು. ಬಾಯಿಯಲ್ಲಿ ಕರವಸ್ತ್ರ, ಸ್ಟಾಕಿಂಗ್ಸ್ ಮತ್ತು ಎಲೆಗಳು ಇದ್ದವು. ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಹನುಮಾನ ಪೊಲೀಸ್ ಠಾಣೆ ಪ್ರಭಾರಿ ಶೈಲ್ ಯಾದವ್, ಸೈಬರ್ ಸೆಲ್, ಫಿಂಗರ್ ಪ್ರಿಂಟ್, ಡಾಗ್ ಸ್ಕ್ವಾಡ್ ಮತ್ತು ಎಫ್‌ಎಸ್‌ಎಲ್ ತಂಡವು ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಿದೆ ಎಂದು ಎಎಸ್‌ಪಿ ತಿಳಿಸಿದ್ದಾರೆ. ಮೃತದೇಹವನ್ನು ಸಂಜೆ ವೈದ್ಯಕೀಯ ಕಾಲೇಜಿಗೆ ತರಲಾಯಿತು. ಇಲ್ಲಿ ಇಬ್ಬರು ವೈದ್ಯರ ತಂಡ ತಡರಾತ್ರಿಯವರೆಗೂ ಮರಣೋತ್ತರ ಪರೀಕ್ಷೆ ನಡೆಸಿತು. ಮೊದಲಿಗೆ ಸುಕ್ಬರಿಯಾ ದೇವಿಯ ಕುಟುಂಬ ಸದಸ್ಯರು 5 ಶಂಕಿತರ ಹೆಸರುಗಳನ್ನು ತೆಗೆದುಕೊಂಡರು. ಎಲ್ಲರನ್ನೂ ವಿಚಾರಿಸಲಾಗಿತ್ತಾದರೂ ಯಾವುದೇ ತೀರ್ಮಾನಕ್ಕೆ ಬರಲಿಲ್ಲ.

ಎಎಸ್ಪಿ ಪ್ರಕಾರ, ಇದಾದ ನಂತರ ಮಹಿಳೆಯ ಮಗ ಗ್ರಾಮದ ಅಪ್ರಾಪ್ತ ವಯಸ್ಕನ ಮೇಲೆ ಅನುಮಾನ ವ್ಯಕ್ತಪಡಿಸಿದನು. ಈ ಅಪ್ರಾಪ್ತ ವಯಸ್ಕ ಎರಡು ವರ್ಷಗಳ ಹಿಂದೆ ನಮ್ಮ ಮನೆಗೆ ಟಿವಿ ನೋಡಲು ಬಂದಿದ್ದನು. ಇದೇ ವೇಳೆ ಮನೆಯಲ್ಲಿದ್ದ ಮೊಬೈಲ್ ಕಳ್ಳತನವಾಗಿತ್ತು. ಇದಕ್ಕೆ ಅಪ್ರಾಪ್ತ ಬಾಲಕನ ಮೇಲೆ ಕುಟುಂಬಸ್ಥರು ಆರೋಪ ಮಾಡಿದ್ದರು. ಅಂದಿನಿಂದ ಆರೋಪಿ ನಮ್ಮ ಕುಟುಂಬದ ಮೇಲೆ ದ್ವೇಷ ಇಟ್ಟುಕೊಂಡಿದ್ದಾನೆ. ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಕೂಡಲೇ ಅಪ್ರಾಪ್ತನನ್ನು ಬಂಧಿಸಿದ್ದಾರೆ. 6 ಗಂಟೆಗಳ ಕಾಲ ಹಲವು ಸುತ್ತುಗಳಲ್ಲಿ ವಿಚಾರಣೆ ನಡೆಸಲಾಯಿತು. ಅಪ್ರಾಪ್ತ ಕೂಡ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಲೇ ಇದ್ದ. ಅವನಲ್ಲಿ ಭಯವಿರಲಿಲ್ಲ. ಘಟನೆ ನಡೆದ ದಿನದಿಂದ ಪೊಲೀಸರು ತನಿಖೆಗೆ ಬಂದಾಗಲೆಲ್ಲ ಪೊಲೀಸರ ಮುಂದೆಯೇ ಓಡಾಡುತ್ತಿದ್ದ.

ಪೊಲೀಸರು ಆರೋಪಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಹಿಳೆಯ ಮಗ ತನ್ನ ತಂದೆಗೆ ಚಿಕಿತ್ಸೆ ನೀಡಲು ಜಬಲ್ಪುರಕ್ಕೆ ಹೋಗಿದ್ದನು. ಮಹಿಳೆ 15 ದಿನಗಳ ಕಾಲ ಒಬ್ಬಂಟಿಯಾಗಿದ್ದಳು. ಜನವರಿ 30ರ ರಾತ್ರಿ ಮಹಿಳೆ ಒಂಟಿಯಾಗಿರುವ ಮಾಹಿತಿ ಮೇರೆಗೆ ಕೊಲೆಗೆ ಯೋಜನೆ ರೂಪಿಸಿದೆ. ಹಿಂದಿನಿಂದ ಮನೆಗೆ ಪ್ರವೇಶಿಸಿದೆ. ಮಂಚದ ಮೇಲೆ ಮಲಗಿದ್ದ ಮಹಿಳೆಯ ಕೈಗಳನ್ನು ಕಟ್ಟಿ ಹಾಕಿದೆ. ಶಬ್ದ ಮಾಡದಂತೆ ಬಾಯಿಗೆ ಸಾಕ್ಸ್ ಮತ್ತು ಕರವಸ್ತ್ರಗಳನ್ನು ತುರುಕಿದೆ. ನಂತರ ನಿರ್ಮಾಣ ಹಂತದಲ್ಲಿರುವ ಮನೆಯ ಭಾಗಕ್ಕೆ ಎಳೆದೊಯ್ದೆ. ಇದಾದ ಬಳಿಕ ಕಬ್ಬಿಣದ ಚೌಕಟ್ಟಿಗೆ ಹಗ್ಗದಿಂದ ಕಾಲನ್ನು ಕಟ್ಟಿದೆ. ನಂತರ ಮುಖ ಮತ್ತು ತಲೆಗೆ ಒದ್ದೆ. ಕೊನೆಗೆ ಕುಡುಗೋಲಿನಿಂದ ಮುಖ, ಗಂಟಲು, ಎದೆಗೆ ಹಲವು ಬಾರಿ ಹೊಡೆದೆ. ಆಕೆ ಮೃತಪಟ್ಟ ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ಖಾಸಗಿ ಭಾಗಕ್ಕೆ ಕೋಲನ್ನು ತುರುಕಿದೆ ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT