ದೇಶ

ನಿಷೇಧಿತ ಪಿಎಫ್‌ಐ ಜತೆ ನಂಟು: ಬಿಹಾರದಲ್ಲಿ ಇಬ್ಬರನ್ನು ಬಂಧಿಸಿದ ಎನ್‌ಐಎ

Lingaraj Badiger

ಪಾಟ್ನಾ: ಇತ್ತೀಚೆಗೆ ನಿಷೇಧಿಸಲಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಶಂಕೆಯ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯು ಬಿಹಾರ ಪೊಲೀಸರ ಸಹಯೋಗದೊಂದಿಗೆ ಭಾನುವಾರ ಮೋತಿಹಾರಿಯಲ್ಲಿ ಇಬ್ಬರನ್ನು ಬಂಧಿಸಿದೆ.

ಬಂಧಿತ ಇಬ್ಬರನ್ನು ತನ್ವೀರ್ ರಾಜಾ ಮತ್ತು ಎಂಡಿ ಅಬಿದ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಪೂರ್ವ ಚಂಪಾರಣ್ ಜಿಲ್ಲೆಯ ನಿವಾಸಿಗಳಾಗಿದ್ದಾರೆ.

ಎನ್‌ಐಎ ನೀಡಿರುವ ಪ್ರಕಟಣೆಯ ಪ್ರಕಾರ, ಬಂಧಿತ ಇಬ್ಬರು ಆರೋಪಿಗಳು ಉದ್ದೇಶಿತ ಹತ್ಯೆ ಮತ್ತು ಕೋಮು ಸೌಹಾರ್ದತೆಗೆ ಅಡ್ಡಿಪಡಿಸುವ ಯೋಜನೆ ರೂಪಿಸಿದ್ದರು ಮತ್ತು ಇದಕ್ಕಾಗಿ ಶಸ್ತ್ರಾಸ್ತ್ರಗಳು ಹಾಗೂ ಮದ್ದು-ಗುಂಡುಗಳನ್ನು ಸಂಗ್ರಹಿಸಿದ್ದರು ಎಂದು ಹೇಳಿದೆ.

"ಶನಿವಾರ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ಉದ್ದೇಶಿತ ಹತ್ಯೆಗಳನ್ನು ನಡೆಸಲು ಪಿಎಫ್‌ಐ ಕಾರ್ಯಕರ್ತರು ರೂಪಿಸಿದ ಸಂಚು ಭೇದಿಸಲು ಎಂಟು ಸ್ಥಳಗಳಲ್ಲಿ ಶೋಧ ನಡೆಸಿದ ನಂತರ ಈ ಇಬ್ಬರು ಆರೋಪಿಗಳನ್ನು ಎನ್‌ಐಎ ಭಾನುವಾರ ಬಂಧಿಸಿದೆ".

SCROLL FOR NEXT