ದೇಶ

ಐಎನ್ಎಸ್ ವಿಕ್ರಾಂತ್ ಹಡಗಿನಲ್ಲಿ ಮೊದಲ ಯುದ್ಧ ವಿಮಾನ ಲ್ಯಾಂಡಿಂಗ್; ಐತಿಹಾಸಿಕ ಮೈಲಿಗಲ್ಲು

Lingaraj Badiger

ಕೊಚ್ಚಿ: ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ನಲ್ಲಿ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ(LCA) ತೇಜಸ್‌ ನ ನೌಕಾ ಆವೃತ್ತಿ ಸೋಮವಾರ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಇದರೊಂದಿಗೆ ನೌಕಾಪಡೆ ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ.

ವಾಹಕದ ಡೆಕ್‌ನಲ್ಲಿ ಸ್ಥಿರ-ವಿಂಗ್ ವಿಮಾನವೊಂದು ಇಳಿಯುತ್ತಿರುವುದು ಇದೇ ಮೊದಲು, ಇದು ಕಾರ್ಯಾಚರಣೆಯ ಮೊದಲು ಹಾರಾಟದ ಪ್ರಯೋಗಗಳಿಗೆ ಒಳಗಾಗುತ್ತಿದೆ.

ಐಎನ್‌ಎಸ್ ವಿಕ್ರಾಂತ್ ಹಡಗಿನಲ್ಲಿ ಎಲ್‌ಸಿಎ(ನೌಕಾಪಡೆ) ಇಳಿಯುತ್ತಿದ್ದಂತೆ ಭಾರತೀಯ ನೌಕಾಪಡೆಯು, ಇದು ಆತ್ಮ ನಿರ್ಭರ್ ಭಾರತ್ ಸಾಧಿಸಿದ ಐತಿಹಾಸಿಕ ಮೈಲಿಗಲ್ಲು. ಇದು ಸ್ವದೇಶಿ ಫೈಟರ್ ಏರ್‌ಕ್ರಾಫ್ಟ್‌ನೊಂದಿಗೆ ಸ್ವದೇಶಿ ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು, ನಿರ್ಮಿಸಲು ಮತ್ತು ನಿರ್ವಹಿಸಲು ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

20,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 45,000 ಟನ್ ತೂಕದ ಐಎನ್‌ಎಸ್ ವಿಕ್ರಾಂತ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾರ್ಯಾರಂಭ ಮಾಡಿತ್ತು. 262 ಮೀಟರ್ ಉದ್ದ ಮತ್ತು 62 ಮೀಟರ್ ಅಗಲದ ಐಎನ್‌ಎಸ್ ವಿಕ್ರಾಂತ್ ಭಾರತದಲ್ಲಿ ನಿರ್ಮಿಸಲಾದ ಅತಿದೊಡ್ಡ ಯುದ್ಧ ನೌಕೆಯಾಗಿದೆ.

SCROLL FOR NEXT