ಪ್ರಮೋದ್ ಸಾವಂತ್ - ಪುಷ್ಕರ್ ಸಿಂಗ್ ಧಾಮಿ - ಜಗನ್ ಮೋಹನ್ ರೆಡ್ಡಿ - ಭಗವಂತ್ ಮಾನ್ 
ದೇಶ

ಟ್ವಿಟರ್ ಸಮೀಕ್ಷೆ: ಈ ನಾಲ್ವರಲ್ಲಿ 'ಮೋಸ್ಟ್ ಹ್ಯಾಂಡ್ಸಮ್ ಸಿಎಂ' ಯಾರು ಗೊತ್ತಾ?

ಟ್ವಿಟರ್ ಸಮೀಕ್ಷೆಯೊಂದು ನಡೆದಿದ್ದು, ಅದರಲ್ಲಿ ಭಾರತದ ಅತ್ಯಂತ ಸುಂದರ ಮುಖ್ಯಮಂತ್ರಿ ಯಾರೆಂಬುದನ್ನು ಆಯ್ಕೆ ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ ಬರೋಬ್ಬರಿ 23 ಸಾವಿರ ಮಂದಿ ಭಾಗವಹಿಸಿ ಆಯ್ಕೆ ಮಾಡಿದ್ದಾರೆ.

ಡೆಹರಾಡೂನ್: ಟ್ವಿಟರ್ ಸಮೀಕ್ಷೆಯಲ್ಲಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಭಾರತದ ಅತ್ಯಂತ ಸುಂದರ ಮುಖ್ಯಮಂತ್ರಿ ಎಂದು ಹೆಸರಿಸಿದ್ದಾರೆ.

ಪಂಜಾಬ್‌ನ ಭಗವಂತ್ ಮಾನ್, ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ, ಗೋವಾದ ಪ್ರಮೋದ್ ಸಾವಂತ್ ಮತ್ತು ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ನಡುವೆ ಮತದಾನ ನಡೆದಿತ್ತು. ಇದರಲ್ಲಿ ಧಾಮಿ ಶೇ 38 ಮತಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಸಾವಂತ್ ಶೇ 32ರಷ್ಟು ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಜಗನ್ ಮೋಹನ್ ರೆಡ್ಡಿ ಮೂರನೇ ಮತ್ತು ಭಗವಂತ್ ಮಾನ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಟ್ವಿಟರ್ ಸಮೀಕ್ಷೆಯಲ್ಲಿ ಸುಮಾರು 20 ಸಾವಿರ ಜನರು ಭಾಗವಹಿಸಿ ನಾಲ್ಕು ಹೆಸರುಗಳನ್ನು ಸೂಚಿಸಿದರು ಮತ್ತು ಆಯ್ಕೆ ಮಾಡಿದರು. ನಂತರ 23 ಸಾವಿರಕ್ಕೂ ಹೆಚ್ಚು ಜನರು ಮತ ಚಲಾಯಿಸಿದರು. ಧಾಮಿಯನ್ನು ಆಯ್ಕೆ ಮಾಡುವ ಮೂಲಕ 'ಅತ್ಯಂತ ಸುಂದರ ಸಿಎಂ' ಎಂದಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಸಂದೀಪ್ ಚಮೋಲಿ, ಸೌಂದರ್ಯವು ಪ್ರಕೃತಿಯ ಕೊಡುಗೆಯಾಗಿದ್ದು, ‘ಹ್ಯಾಂಡ್ಸಮ್ ಮುಖ್ಯಮಂತ್ರಿ’ ಎಂಬ ಬಿರುದು ಪಡೆದಿರುವ ಪುಷ್ಕರ್ ಸಿಂಗ್ ಧಾಮಿ ಅಭಿನಂದನೆಗೆ ಅರ್ಹರು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ