ದೇಶ

ಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪುವುದನ್ನು ದೇಶ ಖಚಿತಪಡಿಸಿಕೊಳ್ಳಬೇಕು: ಧರ್ಮೇಂದ್ರ ಪ್ರಧಾನ್

Nagaraja AB

ಚೆನ್ನೈ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020  ಭಾರತೀಯ ಇತಿಹಾಸದಲ್ಲಿ ಬೇರೂರುವಂತೆ ನಮ್ಮ ಯುವ ಜನತೆಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು 21 ನೇ ಶತಮಾನದ ಸವಾಲುಗಳಿಗೆ ಕೆಲಸ ಮಾಡುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. 

ಶಿಕ್ಷಣ ಸಮಾವೇಶದ ಮೊದಲ ದಿನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವೀಡಿಯೊ ಸಂದೇಶ ನೀಡಿದ ಧರ್ಮೇಂದ್ರ ಪ್ರಧಾನ್, ಶಿಕ್ಷಣವು ಪ್ರತಿಯೊಬ್ಬ ಕೊನೆಯ ವ್ಯಕ್ತಿಯನ್ನು ತಲುಪುವುದನ್ನು ದೇಶ ಖಚಿತಪಡಿಸಿಕೊಳ್ಳಬೇಕು ಮತ್ತು ನಾವು ನಮ್ಮ ಯುವಕರನ್ನು ಜಾಗತಿಕ ಪ್ರಜೆಗಳಾಗಿ ಅಭಿವೃದ್ಧಿಪಡಿಸಬೇಕು ಎಂದರು. 

ಯುವ ಜನತೆ ಉದ್ಯೋಗಾಕಾಂಕ್ಷಿಯಾಗುವ ಬದಲು ಉದ್ಯೋಗ ಸೃಷ್ಟಿಕರ್ತರಾಗಬೇಕು. ಶಿಕ್ಷಣವು ಕಟ್ಟಕಡೆಯ ವ್ಯಕ್ತಿಯನ್ನು ಹೇಗೆ ತಲುಪುತ್ತದೆ ಎಂಬುದನ್ನು ನಾವು ನೋಡಬೇಕು. ಆಗ ಮಾತ್ರ ಭಾರತವು ವಿಶ್ವಗುರುವಿನ ಸ್ಥಾನಮಾನವನ್ನು ಮರಳಿ ಪಡೆಯಬಹುದು,  ಪ್ರತಿಯೊಬ್ಬರು ಸುಲಭವಾಗಿ ಬದುಕುವಂತೆ ಮಾಡುವುದು ಗುರಿಯಾಗಿದ್ದು, ದೇಶದ ಬೆಳವಣಿಗೆಯ ಹಾದಿಯಲ್ಲಿ ಯಾರನ್ನೂ ಬಿಡಬಾರದು. ಅಭಿವೃದ್ಧಿ ಭಾರತದತ್ತ ಮುನ್ನುಗ್ಗಬೇಕು ಎಂದು ಸಚಿವರು ಹೇಳಿದರು. 

ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಕುರಿತಂತೆ ಮಾತನಾಡಿದ ಸಚಿವರು, ಎಲ್ಲಾ ಹಂತದಲ್ಲಿ ಸಮಾಲೋಚನೆ, ಚರ್ಚೆ ನಡೆಸಿದ ಬಳಿಕ ಎನ್ ಇಪಿ 2020 ಜಾರಿಗೊಳಿಸಲಾಗಿದೆ. ಇದು ಸರ್ಕಾರದ ನೀತಿ ಮಾತ್ರವಲ್ಲ, ದೇಶದ ನೀತಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  NEP 2020 ಬಹುಭಾಷಾ ಮತ್ತು ಎಲ್ಲಾ ಭಾರತೀಯ ಭಾಷೆಗಳನ್ನು ಉತ್ತೇಜಿಸಲು ಒತ್ತು ನೀಡುತ್ತದೆ. ಪ್ರಾಥಮಿಕ ತರಗತಿಗಳಲ್ಲಿ ಬೋಧನಾ ಮಾಧ್ಯಮವು ಮಾತೃಭಾಷೆ/ಸ್ಥಳೀಯ ಭಾಷೆಯಾಗಿರುತ್ತದೆ. ಎಲ್ಲಾ ಭಾಷೆಗಳು ನಮ್ಮ ರಾಷ್ಟ್ರೀಯ ಭಾಷೆಗಳು ಎಂಬುದನ್ನು ಇದು ಪುನರುಚ್ಚರಿಸುತ್ತದೆ ಎಂದು ಅವರು ತಿಳಿಸಿದರು. 

ಯುವ ಸಂಗಮದಲ್ಲಿ 1,000 ಯುವ ಜನತೆ ಪಾಲ್ಗೊಳ್ಳಲಿದ್ದಾರೆ. ಇದು ದೇಶದ ವಿವಿಧ ಅಂಶಗಳ ಬಗ್ಗೆ ಬಹು ಆಯಾಮದ ಅನುಭವವನ್ನು ನೀಡುತ್ತದೆ ಎಂದು ತಿಳಿಸಿದ ಧರ್ಮೇಂದ್ರ ಪ್ರಧಾನ್, ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಶಿಕ್ಷಣಕ್ಕಾಗಿ 1.12 ಲಕ್ಷ ಕೋಟಿ ಮೀಸಲಿಟ್ಟಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸಿದರು. 

SCROLL FOR NEXT