ದೇಶ

ಭಾರತವು ಪ್ರಜಾಪ್ರಭುತ್ವದ ತಾಯಿಯಾಗಿದ್ದರೆ, ಭಿನ್ನಾಭಿಪ್ರಾಯವು ಅದರ ಚೊಚ್ಚಲ ಮಗು: ಒಮರ್ ಅಬ್ದುಲ್ಲಾ

Shilpa D

ಚೆನ್ನೈ: ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಪರಿಗಣಿಸುವುದಾಗಿ ಪ್ರಧಾನಿ ಇತ್ತೀಚೆಗೆ ಹೇಳಿದ್ದರು. ಹಾಗಾಗಿ ಭಾರತವು ಪ್ರಜಾಪ್ರಭುತ್ವದ ತಾಯಿಯಾಗಿದ್ದರೆ, ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಚೊಚ್ಚಲ ಮಗು ಎಂದು ನಾನು ನಂಬುತ್ತೇನೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಚೆನ್ನೈನಲ್ಲಿ ನಡೆದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ThinkEdu ಕಾನ್ಕ್ಲೇವ್ 2023 ರ 11 ನೇ ಆವೃತ್ತಿಯಲ್ಲಿ ಮಾತನಾಡಿದ ಅಬ್ದುಲ್ಲಾ, ಪ್ರಜಾಪ್ರಭುತ್ವ ಸಮಾಜದಲ್ಲಿ ಭಿನ್ನಾಭಿಪ್ರಾಯದ ಮಹತ್ವವನ್ನು ಎತ್ತಿ ತೋರಿಸಿದರು.

ಫೇಸ್‌ಬುಕ್ ಪೋಸ್ಟ್‌ಗಳಂತಹ ಸಣ್ಣ ವಿಷಯಗಳು ಬಂಧನಗಳಿಗೆ ಕಾರಣವಾಗಬಹುದು, ಕಾರ್ಟೂನ್‌ಗಳು ಮತ್ತು ಹಾಸ್ಯ ರೇಖಾಚಿತ್ರಗಳನ್ನು ಬರೆದ ಜನರನ್ನು ಬಂಧಿಸುವುದನ್ನು ನೋಡಿದ್ದೇವೆ. ಇದ್ಯಾವುದೂ ಈ ದೇಶಕ್ಕೆ ಆರೋಗ್ಯಕರವಲ್ಲ ಎಂದು ಅಬ್ದುಲ್ಲಾ ಹೇಳಿದರು. ಯಾವುದೇ ಕಾರಣವಿಲ್ಲದೆ ಎಂಟು ತಿಂಗಳ ಕಾಲ ಬಂಧನದಲ್ಲಿರಿಸಲಾಗಿತ್ತು ಎಂದು ಹೇಳುವುದರ ಮೂಲಕ  ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯವನ್ನು ವಿವರಿಸಿದರು.

SCROLL FOR NEXT