ದೇಶ

ಭಾರತ ದೇಶ ಮೋದಿ, ಮೋಹನ್ ಭಾಗವತ್ ಗೆ ಸೇರಿದಂತೆ ಮಹಮೂದ್ ಗೂ ಸೇರಿದೆ, ಈ ಭೂಮಿ ಮುಸ್ಲಿಮರ ಮೊದಲ ತಾಯ್ನಾಡು: ಜಮೀಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ

Sumana Upadhyaya

ನವದೆಹಲಿ: ಈ ಭೂಮಿ ಮುಸ್ಲಿಮರ ಮೊದಲ ತಾಯ್ನಾಡು. ಇಸ್ಲಾಂ ಧರ್ಮವು ಹೊರಗಿನಿಂದ ಬಂದ ಧರ್ಮ ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು ಮತ್ತು ಆಧಾರರಹಿತವಾಗಿದೆ. ಇಸ್ಲಾಂ ಧರ್ಮವು ಎಲ್ಲಾ ಧರ್ಮಗಳಲ್ಲಿ ಅತ್ಯಂತ ಹಳೆಯ ಧರ್ಮವಾಗಿದೆ. ಹಿಂದಿ ಮುಸ್ಲಿಮರಿಗೆ ಭಾರತ ಅತ್ಯುತ್ತಮ ದೇಶ ಎಂದು ಜಮೀಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮಹಮೂದ್ ಮದನಿ ಪ್ರತಿಪಾದಿಸಿದ್ದಾರೆ.

ಭಾರತವು ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಸೇರಿದ್ದಂತೆ ಮಹಮೂದ್‌ಗೆ ಕೂಡ ಸೇರಿದೆ ಎಂದು ಜಮಿಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮಹಮೂದ್ ಮದನಿ ಹೇಳಿಕೆ ನೀಡಿದ್ದಾರೆ. ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ 34ನೇ ಸಾಮಾನ್ಯ ಅಧಿವೇಶನವನ್ನು ಉದ್ದೇಶಿಸಿ ಮದನಿ ಈ ಹೇಳಿಕೆ ನೀಡಿದ್ದಾರೆ.

"ಭಾರತ ನಮ್ಮ ದೇಶ. ಈ ದೇಶ ನರೇಂದ್ರ ಮೋದಿ ಮತ್ತು ಮೋಹನ್ ಭಾಗವತ್ ಅವರಿಗೆ ಸೇರಿರುವಂತೆ ಈ ದೇಶವು ಮಹಮೂದ್ ಅವರಿಗೂ ಸೇರಿದೆ. ಮಹಮೂದ್ ಅವರಿಗಿಂತ ಒಂದು ಇಂಚು ಮುಂದಿಲ್ಲ ಅಥವಾ ಅವರು ಮಹಮೂದ್ಗಿಂತ ಒಂದು ಇಂಚು ಮುಂದಿಲ್ಲ" ಎಂದು ಮದನಿ ಹೇಳಿದ್ದಾರೆ.

ಜಮಿಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥರಾಗಿರುವ ಮದನಿ, ಭಾರತವು ಮುಸ್ಲಿಮರ ಮೊದಲ ತಾಯ್ನಾಡು ಎಂದು ಹೇಳಿದರು. ಇಸ್ಲಾಂ ಹೊರಗಿನಿಂದ ಬಂದ ಧರ್ಮ ಎಂದು ಹೇಳುವುದು ಆಧಾರ ರಹಿತ. ಭಾರತವು ಹಿಂದೂ ಮುಸ್ಲಿಮರಿಗೆ ಅತ್ಯಂತ ಪವಿತ್ರ ದೇಶ ಎಂದರು. 

"ಈ ಭೂಮಿ ಮುಸ್ಲಿಮರ ಮೊದಲ ತಾಯ್ನಾಡು, ಇಸ್ಲಾಂ ಧರ್ಮವು ಹೊರಗಿನಿಂದ ಬಂದ ಧರ್ಮ ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು ಮತ್ತು ಆಧಾರರಹಿತವಾಗಿದೆ. ಇಸ್ಲಾಂ ಧರ್ಮವು ಎಲ್ಲಾ ಧರ್ಮಗಳಲ್ಲಿ ಅತ್ಯಂತ ಹಳೆಯ ಧರ್ಮವಾಗಿದೆ. ಭಾರತವು ಹಿಂದಿ ಮುಸ್ಲಿಮರಿಗೆ ಉತ್ತಮ ದೇಶವಾಗಿದೆ ಎಂದು ಜಮಿಯತ್ ಉಲೇಮಾ-ಇ - ಹಿಂದ್ ಮುಖ್ಯಸ್ಥ ಹೇಳಿದರು.

ಇಸ್ಲಾಮೋಫೋಬಿಯಾ ಮತ್ತು ದ್ವೇಷದ ಭಾಷಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, "ಇಸ್ಲಾಮೋಫೋಬಿಯಾ ಹೆಚ್ಚಳ, ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಮತ್ತು ಪ್ರಚೋದನೆಯ ಪ್ರಕರಣಗಳ ಜೊತೆಗೆ, ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಆತಂಕಕಾರಿ ಮಟ್ಟಕ್ಕೆ ಏರಿದೆ ಎಂದರು, ದೇಶದ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಜನರ ವಿರುದ್ಧ ಕಠಿಣ ಶಿಕ್ಷೆಗೆ ಕೂಡ ಜಮೈತ್ ಒತ್ತಾಯಿಸಿದರು.

SCROLL FOR NEXT