ದೇಶ

ನಿಗದಿಯಂತೆಯೇ ಮಾ.5 ಕ್ಕೆ ಎನ್ಇಇಟಿ-ಪಿಜಿ ಪರೀಕ್ಷೆ: ಮಾಂಡವೀಯ 

Srinivas Rao BV

ನವದೆಹಲಿ: ಎನ್ಇಇಟಿ-ಪಿ ಜಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಸಂಘಗಳು ಹಾಗೂ ವೈದ್ಯರ ಬೇಡಿಕೆಗೆ ಪೂರ್ಣವಿರಾಮ ಹಾಕಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಪರೀಕ್ಷೆಗಳು ನಿಗದಿಯಂತೆಯೇ ನಡೆಯಲಿದೆ ಎಂದು ತಿಳಿಸಿದ್ದಾರೆ.
 
ಯಾರೂ ಬಿಟ್ಟುಹೋಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಸಚಿವಾಲಯ ಇಂಟರ್ನ್ಶಿಪ್  ಮಾಡುತ್ತಿರುವ ಎಲ್ಲಾ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಗಡುವು ದಿನಾಂಕವನ್ನು ವಿಸ್ತರಿಸಿತ್ತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ ಅವರ ಪ್ರಶ್ನೆಗೆ ಮನ್ಸುಖ್ ಮಾಂಡವೀಯ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಎನ್ಇಇಟಿ-ಪಿಜಿ 2023 ಪರೀಕ್ಷೆಗಳನ್ನು ಕೆಲವು ತಿಂಗಳುಗಳ ಕಾಲ ಮುಂದೂಡುವ ವಿದ್ಯಾರ್ಥಿಗಳ ಬೇಡಿಕೆಯ ಬಗ್ಗೆ ಸಚಿವಾಲಯದ ನಿಲುವನ್ನು ಸ್ಪಷ್ಟಪಡಿಸುವಂತೆ ಪ್ರಶ್ನೋತ್ತರ ಕಲಾಪದಲ್ಲಿ ಕೇಳಿದರು. 

ಮಾ.05 ರಂದು ಪರೀಕ್ಷೆ ನಡೆಯಲಿದೆ ಹಾಗೂ ಇದು 5 ತಿಂಗಳ ಹಿಂದೆಯೇ ನಿಗದಿಯಾಗಿತ್ತು. ಯಾವೆಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಬೇಕಿದೆಯೋ ಅವರೆಲ್ಲರೂ ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

SCROLL FOR NEXT