ವಸುಂದರಾ ರಾಜೇ 
ದೇಶ

ಅಸ್ಸಾಂ ರಾಜ್ಯಪಾಲರಾಗಿ ಕಟಾರಿಯಾ: ವಸುಂದರಾ ರಾಜೇ ಮೈನ್ ಸ್ಟ್ರೀಮ್ ರಾಜಕೀಯ? ರಾಜಸ್ತಾನ ವಿಪಕ್ಷ ನಾಯಕರಾಗ್ತಾರಾ ಮಾಜಿ ಸಿಎಂ!

ಗುಲಾಬ್ ಚಂದ್ ಕಟಾರಿಯಾ ಅವರು ಅಸ್ಸಾಂ ರಾಜ್ಯಪಾಲರಾಗಿ ಭಾನುವಾರ ನೇಮಕಗೊಂಡಿದ್ದಾರೆ. ಎಂಟು ಬಾರಿ ಶಾಸಕರಾಗಿ ಮತ್ತು ಒಂದು ಬಾರಿ ಸಂಸದರಾಗಿರುವ ಕಟಾರಿಯಾ ಅವರು ಈ ಹಿಂದೆ ರಾಜಸ್ಥಾನ ಬಿಜೆಪಿ ಅಧ್ಯಕ್ಷರೂ ಆಗಿದ್ದರು.

ಜೈಪುರ: ಗುಲಾಬ್ ಚಂದ್ ಕಟಾರಿಯಾ ಅವರು ಅಸ್ಸಾಂ ರಾಜ್ಯಪಾಲರಾಗಿ ಭಾನುವಾರ ನೇಮಕಗೊಂಡಿದ್ದಾರೆ. ಎಂಟು ಬಾರಿ ಶಾಸಕರಾಗಿ ಮತ್ತು ಒಂದು ಬಾರಿ ಸಂಸದರಾಗಿರುವ ಕಟಾರಿಯಾ ಅವರು ಈ ಹಿಂದೆ ರಾಜಸ್ಥಾನ ಬಿಜೆಪಿ ಅಧ್ಯಕ್ಷರೂ ಆಗಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಯೋಗಕ್ಷೇಮ ವಿಚಾರಿಸಲು ಕರೆ ಮಾಡಿದ್ದರು, ಆದರೆ ಯಾವುದೇ ರೀತಿಯ ಚರ್ಚೆಯಾಗಿಲ್ಲ. ಆದಾಗ್ಯೂ, ಕರೆ ಮೂಲಕ ಕಟಾರಿಯಾಗೆ ಸೂಚನೆ ನೀಡಲಾಗಿತ್ತು ಎಂದು ನಂಬಲಾಗಿದೆ. ದಕ್ಷಿಣ ರಾಜಸ್ಥಾನದ ಆರ್‌ಎಸ್‌ಎಸ್ ಬೆಂಬಲಿತ ನಾಯಕ ಕಟಾರಿಯಾ ಅವರು ಅಂತಹ ನಿರೀಕ್ಷೆಯನ್ನು ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಪ್ರತಿಪಕ್ಷದ ಉಪ ನಾಯಕ ರಾಜೇಂದ್ರ ರಾಥೋಡ್ ಮತ್ತು ಇತರ ನಾಯಕರು ಕಟಾರಿಯಾ ಅವರನ್ನು ರಾಜ್ಯಪಾಲರನ್ನಾಗಿ ಮಾಡಿದ್ದಕ್ಕಾಗಿ ಅಭಿನಂದಿಸಿದ್ದಾರೆ.

ಚುನಾವಣಾ ವರ್ಷದಲ್ಲಿ ಯುವ ಪೀಳಿಗೆಗೆ ನಾಯಕತ್ವದ ಅಧಿಕಾರವನ್ನು ನೀಡುವಲ್ಲಿ ಈ ಕ್ರಮವು  ಉತ್ತಮವಾಗಿ  ಕಂಡುಬರುತ್ತದೆ. ಆದರೆ, ಈಗ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಯಾರಾಗುತ್ತಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ. ಸದ್ಯ ವಿಧಾನಸಭೆ ಕಲಾಪ ನಡೆಯುತ್ತಿರುವುದರಿಂದ ಬಜೆಟ್‌ಗೆ ಉತ್ತರ ನೀಡಬೇಕಿದೆ. ಹೀಗಿರುವಾಗ ಇಂದು ಅಥವಾ ನಾಳೆ ವಿರೋಧ ಪಕ್ಷದ ನಾಯಕರ ಹೆಸರು ಘೋಷಣೆಯಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಆರ್‌ಎಸ್‌ಎಸ್ ಬೆಂಬಲಿತ ಕಟಾರಿಯಾ ಅವರು ಮಾಜಿ ಸಿಎಂ ವಸುಂಧರಾ ರಾಜೆ ಅವರಿಗೆ ಪರ್ಯಾಯವಾಗಿ ಕಾಣಿಸಿಕೊಂಡಿದ್ದರು. ಇದು ರಾಜ್ಯದ ಮುಖ್ಯವಾಹಿನಿಯ ರಾಜಕೀಯದಲ್ಲಿ ರಾಜೇ ಅವರ ಪುನರ್ವಸತಿಗೆ ಕಾರಣವಾಗಬಹುದೇ ಎಂದು ಈಗ ರಾಜಕೀಯ ವಲಯಗಳಲ್ಲಿ ಚರ್ಚೆಯ ವಿಷಯವಾಗಿದೆ. ರಾಜೇ ಅವರಲ್ಲದೆ, ವಿರೋಧ ಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್, ಮಾಜಿ ಅಸೆಂಬ್ಲಿ ಸ್ಪೀಕರ್ ಕೈಲಾಶ್ ಮೇಘವಾಲ್ ಸೇರಿದಂತೆ ಅನೇಕ ನಾಯಕರು ಎಲ್‌ಒಪಿ ರೇಸ್‌ನಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT