ದೇಶ

ಏರೋ ಇಂಡಿಯಾ: ಪ್ರಧಾನಿ ಮೋದಿ ಕ್ರೆಡಿಟ್, ಕಾಂಗ್ರೆಸ್ ವಾಗ್ದಾಳಿ

Nagaraja AB

ನವದೆಹಲಿ: ಬೆಂಗಳೂರಿನ ಯಲಹಂಕದಲ್ಲಿ ಸತತ 14 ವರ್ಷಗಳಿಂದ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಕ್ರೆಡಿಟ್ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

'ಫ್ಯಾನ್ಸಿ ಡ್ರೆಸ್ ನಲ್ಲಿದ್ದ ವ್ಯಕ್ತಿ, ಏರೋ ಇಂಡಿಯಾದ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಸತ್ಯವೇನೆಂದರೆ 1996ರಲ್ಲಿಯೇ ಅದು ಆರಂಭವಾಯಿತು ಎಂದು ಕಾಂಗ್ರೆಸ್ ಪಕ್ಷ ಸೋಮವಾರ ಹೇಳಿದೆ. ಯಲಹಂಕ ವಾಯುನೆಲೆಯಲ್ಲಿ ಪ್ರಧಾನಿ ಮೋದಿ ಏರೋ ಇಂಡಿಯಾದ 14 ನೇ ಆವೃತ್ತಿ ಉದ್ಘಾಟಿಸಿದ ನಂತರ ಕಾಂಗ್ರೆಸ್ ಈ ವಾಗ್ದಾಳಿ ನಡೆಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ, ಜೈರಾಮ್ ರಮೇಶ್, 1996ರ ಹಿಂದೆಯೇ ಏರೋ ಇಂಡಿಯಾ ಆರಂಭವಾಯಿತು. ನಂತರದ ವರ್ಷಗಳಲ್ಲಿ ಅದನ್ನು ಮತ್ತಷ್ಟು ಬಲಪಡಿಸಲಾಯಿತು. ನೆಹರು ಯುಗದ ಮೂಲ ಪತ್ತೆ ಹಚ್ಚುವ ಸಂಸ್ಥೆಗಳ ಉಪಸ್ಥಿತಿಯಿಂದಾಗಿ ಬೆಂಗಳೂರಿನಲ್ಲಿ ಇದನ್ನು ಆಯೋಜಿಸಲಾಗಿತ್ತು ಎಂದು ರಮೇಶ್ ಹೇಳಿದ್ದಾರೆ. 

ಏರೋ ಇಂಡಿಯಾದ 14 ನೇ ಆವೃತ್ತಿ ಉದ್ಘಾಟಿಸಿದ ನಂತರ ಮಾತನಾಡಿದ ಪ್ರಧಾನಿ ಮೋದಿ, ಕಳೆದ ಎಂಟು-ಒಂಬತ್ತು ವರ್ಷಗಳಲ್ಲಿ ಭಾರತವು ತನ್ನ ರಕ್ಷಣಾ ಉತ್ಪಾದನಾ ವಲಯವನ್ನು ಪುನಶ್ಚೇತನಗೊಳಿಸಿದೆ ಮತ್ತು 2024-25ರಲ್ಲಿ ರಕ್ಷಣಾ ಉತ್ಪನ್ನಗಳ ರಫ್ತನ್ನು 1.5 ಬಿಲಿಯನ್ ಅಮೆರಿಕನ್ ಡಾಲರ್ ನಿಂದ 5 ಬಿಲಿಯನ್ ಅಮೆರಿಕನ್ ಡಾಲರ್ ಗೆ ಹೆಚ್ಚಿಸಲು ಎದುರು ನೋಡಲಾಗುತ್ತಿದೆ ಎಂದು ಹೇಳಿದರು.

SCROLL FOR NEXT