ದೇಶ

ಪುಣೆ ಗೂಗಲ್ ಕಚೇರಿಗೆ ಹುಸಿ ಬಾಂಬ್ ಕರೆ, ಕೆಲಕಾಲ ಆತಂಕದ ವಾತಾವರಣ

Nagaraja AB

ಪುಣೆ: ಮಹಾರಾಷ್ಟ್ರದ ಪುಣೆಯ ಗೂಗಲ್ ಕಂಪನಿ ಕಚೇರಿ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂಬ ಕರೆ ಬಂದ ನಂತರ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಇದು ಹುಸಿ ಕರೆ ಎಂಬುದು ದೃಢಪಟ್ಟಿತು ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮದ್ಯದ ನಶೆಯಲ್ಲಿ ಈ ರೀತಿ ಕರೆ ಮಾಡಿದ ವ್ಯಕ್ತಿಯನ್ನು ಹೈದರಾಬಾದ್ ನಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪುಣೆಯ ಮುಂಡ್ವಾ ಪ್ರದೇಶದಲ್ಲಿರುವ ಬಹು ಅಂತಸ್ತಿನ ವಾಣಿಜ್ಯ ಕಟ್ಟಡದ 11ನೇ ಮಹಡಿಯಲ್ಲಿದ್ದ ಗೂಗಲ್ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಭಾನುವಾರ ತಡರಾತ್ರಿ ಕರೆ ಬಂದಿದ್ದಾಗಿ ಉಪ ಪೊಲೀಸ್ ಆಯುಕ್ತ ವಿಕ್ರಾಂತ್ ದೇಶ್ ಮುಖ್ ತಿಳಿಸಿದ್ದಾರೆ.

ನಂತರ ಪೊಲೀಸರು ಮತ್ತು ಬಾಂಬ್ ನಿಷ್ಕ್ರೀಯ ದಳ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಇದೊಂದು ಹುಸಿಕರೆ ಎಂಬುದು ದೃಢಪಟ್ಟಿತು. ಕರೆ ಮಾಡಿದ ವ್ಯಕ್ತಿಯನ್ನು ಹೈದರಾಬಾದ್ ನಲ್ಲಿ ಪತ್ತೆ ಬಂಧಿಸಲಾಗಿದೆ. ಘಟನೆ ಕುರಿತು ಮುಂದಿನ ತನಿಖೆ ನಡೆಯುತ್ತಿದೆ ಎಂದು ಅವರು ಅವರು ತಿಳಿಸಿದ್ದಾರೆ. 

SCROLL FOR NEXT