ಸಂಗ್ರಹ ಚಿತ್ರ 
ದೇಶ

ದಕ್ಷಿಣ ಆಫ್ರಿಕಾದಿಂದ ಭಾರತದ ಗ್ವಾಲಿಯರ್‌ಗೆ ಇನ್ನೂ 12 ಚಿರತೆಗಳ ಆಗಮನ!

ದಕ್ಷಿಣ ಆಫ್ರಿಕಾದಿಂದ ತರಲಾಗುತ್ತಿರುವ 12 ಚಿರತೆಗಳು ಭಾರತಕ್ಕೆ ಬಂದಿವೆ. ಭಾರತೀಯ ವಾಯುಪಡೆಯ C-17 Globemaster ಕಾರ್ಗೋ ವಿಮಾನವು ಈ ಚಿರತೆಗಳನ್ನು ಹೊತ್ತುಕೊಂಡು ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ ಹತ್ತು ಗಂಟೆಯ ಸುಮಾರಿಗೆ ಬಂದಿಳಿದಿದೆ.

ಗ್ವಾಲಿಯರ್: ದಕ್ಷಿಣ ಆಫ್ರಿಕಾದಿಂದ ತರಲಾಗುತ್ತಿರುವ 12 ಚಿರತೆಗಳು ಭಾರತಕ್ಕೆ ಬಂದಿವೆ. ಭಾರತೀಯ ವಾಯುಪಡೆಯ C-17 Globemaster ಕಾರ್ಗೋ ವಿಮಾನವು ಈ ಚಿರತೆಗಳನ್ನು ಹೊತ್ತುಕೊಂಡು ಗ್ವಾಲಿಯರ್ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ ಹತ್ತು ಗಂಟೆಯ ಸುಮಾರಿಗೆ ಬಂದಿಳಿದಿದೆ. ಇಲ್ಲಿಂದ ಈ ಚಿರತೆಗಳನ್ನು ಹೆಲಿಕಾಪ್ಟರ್ ಮೂಲಕ ಕುನೊಗೆ ಕರೆದೊಯ್ಯಲಾಗುತ್ತದೆ. 

ಅಲ್ಲಿ ಕೆಲ ದಿನಗಳ ಕಾಲ ಸಣ್ಣ ಆವರಣದಲ್ಲಿ ಇರಿಸಿ ನಂತರ ಇಲ್ಲಿನ ಪರಿಸರಕ್ಕೆ ಹೊಂದಿಕೊಂಡ ನಂತರ ಬಯಲು ಅರಣ್ಯಕ್ಕೆ ಬಿಡಲಾಗುವುದು. ಕುನೊ ತಲುಪಿದ ನಂತರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೇ ಈ ಚಿರತೆಗಳನ್ನು ಸ್ವಾಗತಿಸಿ ಆವರಣದಲ್ಲಿ ಬಿಡುತ್ತಾರೆ.

ಚೀತಾ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳ ಪ್ರಕಾರ, ದಕ್ಷಿಣ ಆಫ್ರಿಕಾದಿಂದ ತರಲಾಗುತ್ತಿರುವ ಈ ಚಿರತೆಗಳಲ್ಲಿ ಏಳು ಗಂಡು ಮತ್ತು ಐದು ಹೆಣ್ಣು ಚಿರತೆಗಳು ಸೇರಿವೆ. ಮೊದಲು ಸೆಪ್ಟೆಂಬರ್ 2020ರಲ್ಲಿ, ನಮೀಬಿಯಾದಿಂದ ಎಂಟು ಚಿರತೆಗಳನ್ನು ತರಲಾಗಿತ್ತು. ಈ ಚಿರತೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂದರ್ಭದಲ್ಲಿ ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದರು. 

ಇಂತಹ ಪರಿಸ್ಥಿತಿಯಲ್ಲಿ, 12 ಹೊಸ ಚಿರತೆಗಳ ಆಗಮನದ ನಂತರ, ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳ ಸಂಖ್ಯೆ 20ಕ್ಕೆ ಏರುತ್ತದೆ. ಗಮನಾರ್ಹವಾಗಿ, 1952ರಲ್ಲಿ ಚಿರತೆಗಳು ಭಾರತದ ನೆಲದಿಂದ ನಿರ್ನಾಮವಾದವು ಎಂದು ಘೋಷಿಸಲಾಯಿತು. ಪರಿಸರ ವ್ಯವಸ್ಥೆಯನ್ನು ಸಮತೋಲನಗೊಳಿಸುವ ಉದ್ದೇಶದಿಂದ ಭಾರತ ಸರ್ಕಾರವು ಈ ಹಿಂದೆ ಆಫ್ರಿಕನ್ ದೇಶಗಳಿಂದ ಚಿರತೆಗಳನ್ನು ತರಲು ಯೋಜನೆಯನ್ನು ಸಿದ್ಧಪಡಿಸಿತ್ತು.

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿಯ ಯೋಜನೆಯಿಂದಾಗಿ 71 ವರ್ಷಗಳ ನಂತರ ಮತ್ತೊಮ್ಮೆ ಭಾರತ ಭೂಮಿ ಚಿರತೆಗಳಿಂದ ತುಂಬಿದೆ. ಇದು ದೇಶದ ವನ್ಯಜೀವಿ ಇತಿಹಾಸದಲ್ಲಿ ಹೊಸ ಯುಗದ ಆರಂಭ ಎಂದು ನಂಬಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT