ದೇಶ

ಸುಪ್ರೀಂ ಕೋರ್ಟ್ ಕೊಲಿಜಿಯಂ ವ್ಯವಸ್ಥೆ ಬಹುತೇಕ ಪರಿಪೂರ್ಣ ಮಾದರಿ: ಮಾಜಿ ಸಿಜೆಐ

Lingaraj Badiger

ನವದೆಹಲಿ: ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಕೊಲಿಜಿಯಂ ವ್ಯವಸ್ಥೆ ಬಹುತೇಕ ಪರಿಪೂರ್ಣ ಮಾದರಿಯಾಗಿದೆ ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಯು ಯು ಲಲಿತ್ ಅವರು ಶನಿವಾರ ಹೇಳಿದ್ದಾರೆ.
  
"ನ್ಯಾಯಾಂಗ ನೇಮಕಾತಿಗಳು ಮತ್ತು ಸುಧಾರಣೆಗಳು" ಕುರಿತ 'ನ್ಯಾಯಾಂಗ ಉತ್ತರದಾಯಿತ್ವ ಮತ್ತು ಸುಧಾರಣೆ(CJAR) ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಮೂರ್ತಿ ಲಲಿತ್ ಅವರು, ನ್ಯಾಯಾಲಯಗಳ ನ್ಯಾಯಾಧೀಶರ ಹೆಸರುಗಳನ್ನು ಶಿಫಾರಸು ಮಾಡುವಲ್ಲಿ ಕೊಲಿಜಿಯಂ ಕಠಿಣ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.

"ನನ್ನ ಪ್ರಕಾರ, ನಮ್ಮಲ್ಲಿ ಕೊಲಿಜಿಯಂ ವ್ಯವಸ್ಥೆಗಿಂತ ಉತ್ತಮವಾದ ವ್ಯವಸ್ಥೆ ಇಲ್ಲ, ಕೊಲಿಜಿಯಂ ವ್ಯವಸ್ಥೆಗಿಂತ ಗುಣಾತ್ಮಕವಾದದ್ದು ಮತ್ತೊಂದು ಇಲ್ಲ. ಹೀಗಾಗಿ ಈ ಕೊಲಿಜಿಯಂ ವ್ಯವಸ್ಥೆ ಉಳಿಯುವಂತೆ ಮಾಡಲು ನಾವು ಶ್ರಮಿಸಬೇಕು. ಅದೊಂದು ಪರಿಪೂರ್ಣ ಮಾದರಿಯಾಗಿದೆ" ಎಂದು ಮಾಜಿ ಸಿಜೆಐ ಹೇಳಿದ್ದಾರೆ.

2022 ರ ನವೆಂಬರ್‌ನಲ್ಲಿ ನಿವೃತ್ತರಾದ ನ್ಯಾಯಮೂರ್ತಿ ಲಲಿತ್ ಅವರು, "ವಿಷಯ ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ತಲುಪಿದಾಗ, ಆ ಹೆಸರನ್ನು ಒಪ್ಪಿಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ಪರಿಶೀಲಿಸಲು ಪರಿಪೂರ್ಣ ವ್ಯವಸ್ಥೆ ಇದೆ. ಇದು ಯಾರೋ ತೆಗೆದುಕೊಂಡ ವಿಚಿತ್ರ ಕಸರತ್ತು ಅಲ್ಲ. ಇದು ಫೂಲ್ ಪ್ರೂಫ್ ವ್ಯವಸ್ಥೆ" ಎಂದು ಹೇಳಿದ್ದಾರೆ.

SCROLL FOR NEXT