ದೇಶ

ಶಿವಸೇನೆ ಲಾಂಛನ, ಹೆಸರು ಪಡೆಯಲು 2 ಸಾವಿರ ಕೋಟಿ ರೂ ಲಂಚ: ಸಂಜಯ್ ರಾವತ್ ಆರೋಪ

Srinivasamurthy VN

ಮುಂಬೈ: ಮೂಲ 'ಶಿವಸೇನಾ' ಹೆಸರು ಮತ್ತು ಬಿಲ್ಲು-ಬಾಣದ ಚಿಹ್ನೆಗಾಗಿ 2,000 ಕೋಟಿಗೂ ಅಧಿಕ ಹಣಕಾಸು ಅವ್ಯವಹಾರ ನಡೆದಿದೆ ಎಂದು ಶಿವಸೇನೆ (ಉದ್ಧವ್‌ ಠಾಕ್ರೆ ಬಣದ) ಸಂಸದ ಹಾಗೂ ವಕ್ತಾರ ಸಂಜಯ್ ರಾವತ್  ಗಂಭೀರ ಆರೋಪ ಮಾಡಿದ್ದಾರೆ.

ಭಾನುವಾರ ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ರಾವತ್, '‘ನನಗೆ ಖಚಿತ ಮಾಹಿತಿ ಸಿಕ್ಕಿದೆ, ನನಗೆ ವಿಶ್ವಾಸವಿದೆ, ಇದು ಕೇವಲ ಪ್ರಾಥಮಿಕ ಅಂಕಿ ಅಂಶ ಮಾತ್ರವೇ ಅಲ್ಲ ಬದಲಿಗೆ ಇದು ಶೇ. 100ರಷ್ಟು ದೃಢ ಮಾಹಿತಿ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಸರಣಿ ಟ್ವೀಟ್ ಕೂಡ ಮಾಡಿರುವ ರಾವತ್, 'ಇದು ದೇಶದ ಇತಿಹಾಸದಲ್ಲೇ ಹಿಂದೆಂದೂ ಕಂಡುಕೇಳರಿಯದ ಸಂಗತಿ. ಇನ್ನೂ ಕೆಲವು ವಿಷಯಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು’ ಎಂದು ಹೇಳಿದ್ದಾರೆ. 

ಸಂಜಯ್‌ ರಾವುತ್‌ ಆರೋಪಗಳಿಂದಾಗಿ ಭಾರತೀಯ ಚುನಾವಣಾ ಆಯೋಗದ (ಇಸಿಐ)ದ ನಿರ್ಧಾರದ ಮೇಲೆ ಅನುಮಾನ ಮೂಡುವಂತಾಗಿದೆ. ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಬಣಕ್ಕೆ ಮೂಲ ಶಿವಸೇನಾದ ಹೆಸರು ಮತ್ತು 'ಬಿಲ್ಲು-ಬಾಣ'ದ ಚಿಹ್ನೆಯನ್ನು ಮಂಜೂರು ಮಾಡಿ ಚುನಾವಣಾ ಆಯೋಗ ಇತ್ತೀಚೆಗೆ ಆದೇಶಿಸಿತ್ತು. ಇದರ ಹಿನ್ನೆಲೆಯಲ್ಲಿ ರಾವತ್‌ ಈ ಹೇಳಿಕೆ ನೀಡಿದ್ದಾರೆ.

SCROLL FOR NEXT