ಸಾಂದರ್ಭಿಕ ಚಿತ್ರ 
ದೇಶ

ತೆಲಂಗಾಣ: ಮೀಸಲು ಅರಣ್ಯದಲ್ಲಿ ಬಿಯರ್ ಬಾಟಲಿಯೊಳಗೆ ಐಇಡಿ, ಪೊಲೀಸರ ವಶಕ್ಕೆ

ತೆಲಂಗಾಣದ ಮುಲುಗು ಜಿಲ್ಲೆಯ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆಯ ವೇಳೆ ಮೀಸಲು ಅರಣ್ಯ ಪ್ರದೇಶದಲ್ಲಿ ಬಿಯರ್ ಬಾಟಲಿ ಒಳಗೆ ಸುಧಾರಿತ ಸ್ಫೋಟಕ ಹಾಕಿರುವುದನ್ನು ಪತ್ತೆ ಮಾಡಿದ್ದಾರೆ.

ಮುಲುಗು: ತೆಲಂಗಾಣದ ಮುಲುಗು ಜಿಲ್ಲೆಯ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆಯ ವೇಳೆ ಮೀಸಲು ಅರಣ್ಯ ಪ್ರದೇಶದಲ್ಲಿ ಬಿಯರ್ ಬಾಟಲಿ ಒಳಗೆ ಸುಧಾರಿತ ಸ್ಫೋಟಕ ಹಾಕಿರುವುದನ್ನು ಪತ್ತೆ ಮಾಡಿದ್ದಾರೆ. ವೆಂಕಟಾಪುರಂ ಮಂಡಲದ ಪಾಮುನೂರು ಗ್ರಾಮದ ಬಳಿಯ ಮೀಸಲು ಅರಣ್ಯದಲ್ಲಿ ನಿಷೇಧಿತ ಮಾವೋವಾದಿಗಳು ಅಳವಡಿಸಿದ್ದ ಐಇಡಿ ವಶಪಡಿಸಿಕೊಳ್ಳಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಫೆಬ್ರವರಿ 17 ರಂದು ಗ್ರಾಮಗಳಿಗೆ ಭೇಟಿ ನೀಡುವ ಪೊಲೀಸರನ್ನು ಕೊಲ್ಲುವ ಉದ್ದೇಶದಿಂದ ನಿಷೇಧಿತ ಮಾವೋವಾದಿ ಪಕ್ಷದ ಉನ್ನತ ನಾಯಕರು ಯೋಜನೆ ರೂಪಿಸಿ ಕಾಡಿನಲ್ಲಿ ಐಇಡಿ ಸ್ಫೋಟಕ ಇಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಿತು ಎಂದು  ಏತೂರ್ನಗರಂ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸಿರಿಸೆಟ್ಟಿ ಸಂಕೀರ್ತ್ ಹೇಳಿದ್ದಾರೆ. ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಮತ್ತು ಬಿಡಿ ತಂಡದೊಂದಿಗೆ ಪೊಲೀಸ್ ತಂಡವು ಐಇಡಿ ಪತ್ತೆ ಮಾಡಲು ಪಾಮುನೂರು ಗ್ರಾಮದ ಪಶ್ಚಿಮ ಮೀಸಲು ಪ್ರದೇಶಕ್ಕೆ ತೆರಳಿತು.

ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸುವಾಗ ರಸ್ತೆಯಲ್ಲಿ ವಿದ್ಯುತ್ ತಂತಿ ಕಂಡುಬಂದಿದೆ. ನಂತರ ಒಂದು ಬಿಯರ್ ಬಾಟಲ್ ನಲ್ಲಿ ಐಇಡಿ ಪತ್ತೆಯಾಗಿದೆ. ತಕ್ಷಣವೇ,ತಂಡವು ಬಾಂಬ್ ನಿಷ್ಕ್ರಿಯ ತಂಡದ ಸಹಾಯ ಪಡೆದು ಐಇಡಿ ವಶಕ್ಕೆ ಪಡೆಯಿತು ಎಂದು ಪ್ರಕಟಣೆ ತಿಳಿಸಿದೆ.  ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ವೆಂಕಟಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಎಸ್ಪಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

ಬಕ್ರೀದ್ ಮೇಕೆ ವಿಷಯವಾಗಿ ಮುಂಬೈ ಸೊಸೈಟಿಯಲ್ಲಿ ಭಾರಿ ವಿವಾದ; VHP ಕಾರ್ಯಕರ್ತರ ಮೇಲೆ ಬ್ಲೇಡ್ ನಿಂದ ಹಲ್ಲೆ!

IPL 2026 Qualifier 1: ರಜತ್ ಪಟಿದಾರ್ ಸ್ಫೋಟಕ ಬ್ಯಾಟಿಂಗ್, GTಗೆ ಗೆಲ್ಲಲು 255 ರನ್ ಬೃಹತ್ ಗುರಿ ನೀಡಿದ RCB

ಬೆಂಗಳೂರು: ದೃಷ್ಟಿಹೀನ ಸ್ನೇಹಿತೆ ಬಳಿ ಇದ್ದ 49.5 ಲಕ್ಷ ರೂ. ನಗದು, ಚಿನ್ನ ಕದ್ದ ಖದೀಮ ದಂಪತಿ ಬಂಧನ!

SCROLL FOR NEXT