ಎಂಸಿಡಿಯಲ್ಲಿ ಕುಸಿದು ಬಿದ್ದ ಎಎಪಿ ಸದಸ್ಯ 
ದೇಶ

ದೆಹಲಿ: ಎಂಸಿಡಿಯಲ್ಲಿ ಮತ್ತೆ ಎಎಪಿ, ಬಿಜೆಪಿ ಸದಸ್ಯರ ನಡುವೆ ಮಾರಾಮಾರಿ; ಕುಸಿದು ಬಿದ್ದ ಕೌನ್ಸಿಲರ್! ವಿಡಿಯೋ

ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ (ಎಂಸಿಡಿ) ಮತ್ತೆ ಬಿಜೆಪಿ ಮತ್ತು ಎಎಪಿ ಕೌನ್ಸಿಲರ್ ಗಳ ನಡುವೆ ಮಾರಾಮಾರಿ ನಡೆದಿದೆ.ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಕೌನ್ಸಿಲರ್ ಗಳ ನಡುವೆ ಘರ್ಷಣೆ ಸಂಭವಿಸಿದೆ. ಉಭಯ ಪಕ್ಷಗಳ ಕೌನ್ಸಿಲರ್ ಗಳ ನಡುವೆ ಪರಸ್ಪರ ತಳ್ಳಾಟ, ಗಲಾಟೆ, ಹಲ್ಲೆ ನಡೆದಿದೆ.

ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ (ಎಂಸಿಡಿ) ಮತ್ತೆ ಬಿಜೆಪಿ ಮತ್ತು ಎಎಪಿ ಕೌನ್ಸಿಲರ್ ಗಳ ನಡುವೆ ಮಾರಾಮಾರಿ ನಡೆದಿದೆ.

ಶುಕ್ರವಾರ ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ, ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಕೌನ್ಸಿಲರ್ ಗಳ ನಡುವೆ ಘರ್ಷಣೆ ಸಂಭವಿಸಿದ್ದು, ಉಭಯ ಪಕ್ಷಗಳ ಕೌನ್ಸಿಲರ್ ಗಳ ನಡುವೆ ಪರಸ್ಪರ ತಳ್ಳಾಟ, ಗಲಾಟೆ, ಹಲ್ಲೆ ನಡೆದಿದೆ. ಇದರಿಂದಾಗಿ ಕೌನ್ಸಿಲರ್ ಒಬ್ಬರು ಎಂಸಿಡಿ ಸದನದಲ್ಲಿ ಕುಸಿದು ಬಿದ್ದಿದ್ದಾರೆ.  

#WATCH | Ruckus breaks out at Delhi Civic Centre once again as AAP and BJP Councillors jostle, manhandle and rain blows on each other. This is the third day of commotions in the House. pic.twitter.com/Sfjz0osOSk

ಎಂಸಿಡಿಯಲ್ಲಿ ಮೂರನೇ ಬಾರಿಗೆ ಈ ರೀತಿಯ ಅಹಿತಕರ ಘಟನೆ ನಡೆದಿದೆ. ಫೆಬ್ರವರಿ 23 ರಂದು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಡೆಯುವಾಗ ಮಾರಾಮರಿ ನಡೆದಿದ್ದರಿಂದ ಇಂದಿಗೆ ಚುನಾವಣೆಯನ್ನು  ಮುಂದೂಡಲಾಗಿತ್ತು. ಇಂದು ಕೂಡಾ ಚುನಾವಣೆ ಸಂದರ್ಭದಲ್ಲಿ ಕೌನ್ಸಿಲರ್ ಗಳು ತಾವು ಜನರಿಂದ ಚುನಾಯಿತರಾದ ಪ್ರತಿನಿಧಿಗಳು ಎಂಬುದನ್ನು ಮರೆತು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಮಹಿಳಾ ಮೇಯರ್ ಶೆಲ್ಲಿ ಒಬೆರಾಯ್ ಮೇಲೆ ಹಲ್ಲೆ ನಡೆಸಿದ ಬಿಜೆಪಿಯ ಗೂಂಡಾಗಳು ತಮ್ಮ ಮೇಲೂ ಹಲ್ಲೆ ನಡೆಸಿರುವುದಾಗಿ ಹಲ್ಲೆಗೊಳಗಾದ ಎಎಪಿ ಕೌನ್ಸಿಲರ್ ಅಶೋಕ್ ಕುಮಾರ್ ಮಾನು ಮಾಧ್ಯಮಗಳ ಮುಂದೆ ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT