ಬಿಜೆಪಿ ಟ್ವೀಟ್ ಮಾಡಿರುವ ಪೋಸ್ಟರ್ 
ದೇಶ

ದೆಹಲಿ ಮಹಾನಗರ ಪಾಲಿಕೆಯಲ್ಲಿ ಹಿಂಸಾಚಾರಕ್ಕೆ ಎಎಪಿ 'ವಿಲನ್' ಅತಿಶಿ ಕಾರಣ: ಬಿಜೆಪಿ

ಎಎಪಿ ಶಾಸಕ ಅತಿಶಿ ಅವರನ್ನು "ಖಳನಾಯಕಿ" ಎಂದು ಕರೆದಿರುವ ಬಿಜೆಪಿ, ದೆಹಲಿ ಮಹಾನಗರ ಪಾಲಿಕೆ(ಎಂಸಿಡಿ)ಯ ಆರು ಸದಸ್ಯರ ಸ್ಥಾಯಿ ಸಮಿತಿ ಚುನಾವಣೆ ವೇಳೆ ಸದನದಲ್ಲಿ ನಡೆದ ಗಲಾಟೆಗೆ ಆಪ್ ಶಾಸಕಿಯೇ ಕಾರಣ ಎಂದು ಶನಿವಾರ...

ನವದೆಹಲಿ: ಎಎಪಿ ಶಾಸಕ ಅತಿಶಿ ಅವರನ್ನು "ಖಳನಾಯಕಿ" ಎಂದು ಕರೆದಿರುವ ಬಿಜೆಪಿ, ದೆಹಲಿ ಮಹಾನಗರ ಪಾಲಿಕೆ(ಎಂಸಿಡಿ)ಯ ಆರು ಸದಸ್ಯರ ಸ್ಥಾಯಿ ಸಮಿತಿ ಚುನಾವಣೆ ವೇಳೆ ಸದನದಲ್ಲಿ ನಡೆದ ಗಲಾಟೆಗೆ ಆಪ್ ಶಾಸಕಿಯೇ ಕಾರಣ ಎಂದು ಶನಿವಾರ ತರಾಟೆಗೆ ತೆಗೆದುಕೊಂಡಿದೆ.

ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಅವರೊಂದಿಗೆ ಆಮ್ ಆದ್ಮಿ ಪಕ್ಷದ(ಎಎಪಿ) ಶಾಸಕರಾದ ಅತಿಶಿ ಮತ್ತು ದುರ್ಗೇಶ್ ಪಾಠಕ್ ಅವರ ಮಾರ್ಫ್ ಮಾಡಿದ ಚಿತ್ರಗಳಿರುವ ಅಣಕು ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿರುವ ದೆಹಲಿ ಬಿಜೆಪಿ, "ಸದನದಲ್ಲಿ ಹಿಂಸಾಚಾರ ನಡೆಸಿದ್ದು ಮತ್ತು ಸರ್ವಾಧಿಕಾರಿ ರೀತಿ ವರ್ತಿಸಿದ್ದು ಎಎಪಿಯ 'ಖಳನಾಯಕ'ರು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದೆ.

ಈ ಬಗ್ಗೆ ಶಾಸಕಿಯಿಂದ ಅಥವಾ ಎಎಪಿಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಹೌಸ್ ಬಿಜೆಪಿ ಕೌನ್ಸಿಲರ್‌ಗಳ ಭಾರೀ ಪ್ರತಿಭಟನೆಗೆ ಸಾಕ್ಷಿಯಾದ ನಂತರ ಚುನಾವಣೆಯ ಸಮಯದಲ್ಲಿ ಚಲಾಯಿಸಿದ ಮತವನ್ನು "ಅಸಿಂಧು" ಎಂದು ಘೋಷಿಸಲಾಗಿದೆ.

ಶುಕ್ರವಾರ ಪ್ರಮುಖ ಆರು ಸದಸ್ಯರ ಸ್ಥಾಯಿ ಸಮಿತಿಗೆ ನಡೆದ ಚುನಾವಣೆ ವೇಳೆ ಮೇಯರ್ ಶೆಲ್ಲಿ ಒಬೆರಾಯ್ ಒಂದು ಮತವನ್ನು ಅಸಿಂಧುಗೊಳಿಸುತ್ತಿದ್ದಂತೆಯೇ  ಉಭಯ ಪಕ್ಷಗಳ ಕೌನ್ಸಿಲರ್ ಗಳು ಕೂಗಾಟದ ನಡುವೆ ಪರಸ್ಪರ ತಳ್ಳಾಟ, ನೂಕಾಟ ನಡೆದು ಹೊಡೆದಾಡಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ