ದೇಶ

ಛತ್ತೀಸ್‌ಗಢ: ನಕ್ಸಲರಿಂದ ಐಇಡಿ ಸ್ಫೋಟ, ಸಿಎಎಫ್ ಯೋಧ ಹುತಾತ್ಮ

Lingaraj Badiger

ನಾರಾಯಣಪುರ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭಾನುವಾರ ನಕ್ಸಲೀಯರು ಅಳವಡಿಸಿದ್ದ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸ್ಫೋಟಗೊಂಡು ಛತ್ತೀಸ್‌ಗಢ ಸಶಸ್ತ್ರ ಪಡೆ(ಸಿಎಎಫ್) ಹೆಡ್ ಕಾನ್‌ಸ್ಟೆಬಲ್ ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
          
ಓರ್ಚಾ ಪೊಲೀಸ್ ಠಾಣಾ ವ್ಯಾಪ್ತಿಯ ಬಟಮ್ ಗ್ರಾಮದ ಬಳಿ ಇಂದು ಬೆಳಗ್ಗೆ 7 ಗಂಟೆಗೆ ಈ ಘಟನೆ ನಡೆದಿದೆ ಎಂದು ನಾರಾಯಣಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಸಾಗರ್ ಸಿದರ್ ಅವರು ತಿಳಿಸಿದ್ದಾರೆ.

ಇದನ್ನು ಓದಿ: ಜಾರ್ಖಂಡ್‌ನಲ್ಲಿ ಸ್ಫೋಟಕಗಳೊಂದಿಗೆ 6 ಮಾವೋವಾದಿಗಳ ಬಂಧನ
        
ಈ ಪ್ರದೇಶದಲ್ಲಿ ನಕ್ಸಲೀಯರು ಬ್ಯಾನರ್‌ಗಳನ್ನು ಹಾಕಿದ್ದಾರೆ ಎಂಬ ಮಾಹಿತಿ ಪಡೆದ ನಂತರ, ಸಿಎಎಫ್ ತಂಡ ರಾಜ್ಯ ರಾಜಧಾನಿ ರಾಯ್‌ಪುರದಿಂದ ಸುಮಾರು 300 ಕಿಮೀ ದೂರದಲ್ಲಿರುವ ಬಟಮ್ ಗ್ರಾಮದ ಬಳಿ ಗಸ್ತು ಆರಂಭಿಸಿತ್ತು.
        
ಗಸ್ತು ತಂಡ ಬಟಮ್ ಮೂಲಕ ಮುನ್ನಡೆಯುತ್ತಿದ್ದಾಗ, ಸಿಎಎಫ್‌ನ 16ನೇ ಬೆಟಾಲಿಯನ್‌ಗೆ ಸೇರಿದ ಹೆಡ್ ಕಾನ್‌ಸ್ಟೆಬಲ್ ಸಂಜಯ್ ಲಾಕ್ರಾ ಅವರು ಅಜಾಗರೂಕತೆಯಿಂದ IED ಮೇಲೆ ಹೆಜ್ಜೆ ಹಾಕಿದರು. ತಕ್ಷಣ ಐಇಡಿ ಸ್ಫೋಟಗೊಂಡಿತು ಎಂದು ಅಧಿಕಾರಿ ತಿಳಿಸಿದ್ದಾರೆ.
        
ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯ ನಿವಾಸಿಯಾದ ಸಂಜಯ್ ಲಾಕ್ರಾ ಅವರ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT