ದೇಶ

2022ರಲ್ಲಿ ರೈಲಿನಲ್ಲಿ 123 ಮಹಿಳೆಯರ ಹೆರಿಗೆ ಮಾಡಿಸಲು ಆರ್ ಪಿಎಫ್ ಸಿಬ್ಬಂದಿ ಸಹಾಯ

Lingaraj Badiger

ನವದೆಹಲಿ: 2022 ರಲ್ಲಿ ಭಾರತೀಯ ರೈಲ್ವೆಯ ಮಹಿಳಾ ಆರ್‌ಪಿಎಫ್ ಸಿಬ್ಬಂದಿ ರೈಲ್ವೆಯಲ್ಲಿ ತಮ್ಮ ಕರ್ತವ್ಯದ ಸಮಯದಲ್ಲಿ ಮಾನವೀಯತೆ ಮೆರೆದಿದ್ದು, ಕಳೆದ ವರ್ಷ ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಹಠಾತ್ತನೆ ಹೆರಿಗೆ ನೋವು ಕಾಣಿಸಿಕೊಂಡ 175ಕ್ಕೂ ಹೆಚ್ಚು ಗರ್ಭಿಣಿ ಮಹಿಳೆಯರಿಗೆ ಸಹಾಯ ಮಾಡಿದ್ದಾರೆ.

ಅಧಿಕೃತ ಮಾಹಿತಿಯ ಪ್ರಕಾರ, ಮಹಿಳಾ ಆರ್‌ಪಿಎಫ್ ಸಿಬ್ಬಂದಿ(ಅಸ್ತಿತ್ವದಲ್ಲಿರುವ ಆರ್‌ಪಿಎಫ್‌ನ ಒಟ್ಟು ಸಾಮರ್ಥ್ಯದ ಶೇ. 9 ರಷ್ಟಿದ್ದಾರೆ) ಪ್ರಯಾಣ ಮಾಡುವಾಗ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡ 123 ಗರ್ಭಿಣಿ ಮಹಿಳಾ ಪ್ರಯಾಣಿಕರಿಗೆ ಹೆರಿಗೆ ಮಾಡಿಸಲು ಸಹಾಯ ಮಾಡಿದ್ದಾರೆ.

"2022 ರಲ್ಲಿ ಆರ್‌ಪಿಎಫ್ ಮಹಿಳಾ ಸಿಬ್ಬಂದಿ ನೀಡಿದ ನೆರವು ನೀಡಿದ ಆ ಎಲ್ಲಾ ಮಹಿಳೆಯರು ಮತ್ತು ಅವರ ಮಕ್ಕಳು ಸುರಕ್ಷಿತವಾಗಿದ್ದಾರೆ" ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇನ್ನು 62 ಗರ್ಭಿಣಿ ಮಹಿಳೆಯರು ರೈಲಿಗಾಗಿ ನಿಲ್ದಾಣದಲ್ಲಿ ಕುಳಿತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರಿಗೂ ಸಹಾಯ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರೈಲಿನಲ್ಲಿ ಪ್ರಯಾಣಿಸುವಾಗ ಅಥವಾ ರೈಲಿಗಾಗಿ ರೈಲ್ವೇ ಆವರಣದಲ್ಲಿ ಕಾಯುತ್ತಿರುವಾಗ ಹಠಾತ್ತನೆ ಹೆರಿಗೆ ನೋವು ಕಾಣಿಸಿಕೊಂಡರೆ ಗರ್ಭಿಣಿಯರಿಗೆ ಸಹಾಯ ಮಾಡಲು ಭಾರತೀಯ ರೈಲ್ವೇಯು "ಆಪರೇಷನ್ ಮಾತೃಶಕ್ತಿ" ಎಂಬ ಕೇಂದ್ರವನ್ನು ಸ್ಥಾಪಿಸಿದೆ.

SCROLL FOR NEXT