ದೇಶ

ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ನಲ್ಲಿ ಮೊದಲ ಮಹಿಳಾ ಅಧಿಕಾರಿ ಕರ್ತವ್ಯಕ್ಕೆ ನಿಯೋಜನೆ!

Sumana Upadhyaya

ನವದೆಹಲಿ: ಭೂಮಿ ಮೇಲಿನ ಅತಿ ಎತ್ತರ ಯುದ್ಧಭೂಮಿ ಸಿಯಾಚಿನ್ ನೀರ್ಗಲ್ಲಿನ ಕುಮಾರ್ ಪೋಸ್ಟ್ ಯುದ್ಧಭೂಮಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಮೊದಲ ಮಹಿಳಾ ಅಧಿಕಾರಿ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಅಧಿಕಾರಿ ಕ್ಯಾಪ್ಟನ್ ಶಿವ ಚೌಹಾಣ್ ಆಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ಸೇನೆ, ಸಂಪ್ರದಾಯವನ್ನು ಮುರಿದು ಕ್ಯಾಪ್ಟನ್ ಶಿವ ಅವರು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದೆ. ಕುಮಾರ್ ಪೋಸ್ಟ್ ನಲ್ಲಿ ನೇಮಕಗೊಳ್ಳುವ ಮುನ್ನ ತೀವ್ರ ಕಠಿಣ ತರಬೇತಿ ಪಡೆಯಲಿದ್ದಾರೆ.

ಭೂಮಿ ಮೇಲಿನ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ನೀರ್ಗಲ್ಲು ಆಗಿದ್ದು, ಇಲ್ಲಿ 1984ರಿಂದ ಭಾರತ-ಪಾಕಿಸ್ತಾನ ಕದನ ನಡೆಯುತ್ತಲೇ ಇದೆ. 

ಕಳೆದ ವರ್ಷ 2021ರ ಸೆಪ್ಟೆಂಬರ್ ತಿಂಗಳಲ್ಲಿ 15,632 ಅಡಿ ಎತ್ತರದ ಕುಮಾರ್ ಪೋಸ್ಟ್ ಗೆ ಎಂಟು ಮಂದಿಯ ವಿಶೇಷ ಚೇತನರ ತಂಡ ತಲುಪಿ ವಿಶ್ವದಾಖಲೆ ಮಾಡಿದೆ.

SCROLL FOR NEXT