ಸಾಂದರ್ಭಿಕ ಚಿತ್ರ 
ದೇಶ

ಕುಡಿದ ಅಮಲಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ: ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಘಟನೆ!

ಅಮೆರಿಕದ ನ್ಯೂಯಾರ್ಕ್‌ನಿಂದ ದಿಲ್ಲಿಗೆ ಬರುತ್ತಿದ್ದ ವಿಮಾನದಲ್ಲಿ ಸುಮಾರು 70 ವರ್ಷದ ವೃದ್ಧೆ ಮೇಲೆ ಆತ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನಲಾಗಿದೆ.

ನವದೆಹಲಿ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ಮಾಡಿದ ಘಟನೆ ಏರ್ ಇಂಡಿಯಾ ವಿಮಾನದಲ್ಲಿ ಇತ್ತೀಚೆಗೆ ನಡೆದಿದೆ. ಅಮೆರಿಕದ ನ್ಯೂಯಾರ್ಕ್‌ನಿಂದ ದಿಲ್ಲಿಗೆ ಬರುತ್ತಿದ್ದ ವಿಮಾನದಲ್ಲಿ ಸುಮಾರು 70 ವರ್ಷದ ವೃದ್ಧೆ ಮೇಲೆ ಆತ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನಲಾಗಿದೆ.

ವಿಮಾನದ ಸಿಬ್ಬಂದಿ ಬಳಿ ಮಹಿಳೆ ದೂರು ನೀಡಿದ್ದರೂ, ಅಸಭ್ಯವಾಗಿ ವರ್ತಿಸಿದ್ದ ಪ್ರಯಾಣಿಕನನ್ನು ಬಂಧಿಸಲಿಲ್ಲ. ಬದಲಾಗಿ ವಿಮಾನ ಇಳಿಯುತ್ತಿದ್ದಂತೆಯೇ ಯಾವುದೇ ವಿಚಾರಣೆ ಕೂಡ ಇಲ್ಲದೆ ನಿರ್ಗಮಿಸಲು ಅವಕಾಶ ನೀಡಲಾಗಿದೆ.

ವಿಮಾನದಲ್ಲಿ ತಾವು ಎದುರಿಸಿದ ಅವಮಾನಕರ ಸನ್ನಿವೇಶ ಹಾಗೂ ಏರ್ ಇಂಡಿಯಾ ಸಿಬ್ಬಂದಿ ನಿರ್ಲಕ್ಷ್ಯದ ಕುರಿತಂತೆ ಟಾಟಾ ಸಮೂಹದ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಮಹಿಳೆ ಪತ್ರ ಬರೆದ ಬಳಿಕವಷ್ಟೇ ತನಿಖೆ ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನವೆಂಬರ್ 26ರಂದು ನ್ಯೂಯಾರ್ಕ್- ಜೆಕೆಎಫ್ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೊರಟ ಏರ್ ಇಂಡಿಯಾ ಎಐ-102 ವಿಮಾನದಲ್ಲಿನ ಬಿಜಿನೆಸ್ ದರ್ಜೆಯಲ್ಲಿ ಈ ಘಟನೆ ನಡೆದಿತ್ತು.

"ಊಟ ವಿತರಣೆ ಮಾಡಿ, ಲೈಟ್‌ಗಳನ್ನು ಸ್ವಿಚ್ ಆಫ್ ಮಾಡಿದ ಸ್ವಲ್ಪ ಹೊತ್ತಿನಲ್ಲಿಯೇ ಮತ್ತೊಬ್ಬ ಪ್ರಯಾಣಿಕ ನನ್ನ ಸೀಟಿನ ಕಡೆ ನಡೆದು ಬಂದಿದ್ದ. ಆತ ಸಂಪೂರ್ಣವಾಗಿ ಅಮಲಿನಲ್ಲಿದ್ದ. ತನ್ನ ಪ್ಯಾಂಟ್‌ನ ಜಿಪ್ ತೆರೆದು, ತನ್ನ ಖಾಸಗಿ ಅಂಗವನ್ನು ನನ್ನ ಎದುರು ತೋರಿಸಲು ಆರಂಭಿಸಿದ್ದ" ಎಂದು ಮಹಿಳೆ ಪತ್ರದಲ್ಲಿ ಆರೋಪಿಸಿದ್ದಾರೆ.

ನನ್ನ ಬಟ್ಟೆಗಳು, ಶೂಸ್ ಮತ್ತು ಬ್ಯಾಗ್ ಸಂಪೂರ್ಣವಾಗಿ ಮೂತ್ರದಲ್ಲಿ ನೆಂದು ಹೋಗಿತ್ತು. ವ್ಯವಸ್ಥಾಪಕಿಯು ನನ್ನ ಜತೆ ಸೀಟಿನ ಬಳಿ ಬಂದು, ಅದು ಮೂತ್ರದ ವಾಸನೆಯೇ ಎಂದು ಪರಿಶೀಲಿಸಿದ್ದರು. ಬಳಿಕ ನನ್ನ ಚೀಲ ಹಾಗೂ ಶೂಸ್‌ಗೆ ಸೋಂಕು ನಿವಾರಕವನ್ನು ಸಿಂಪಡಿಸಿದ್ದರು" ಎಂದು ವಿವರಿಸಿದ್ದಾರೆ.

ಏರ್ ಇಂಡಿಯಾ ಈ ಘಟನೆಯ ಬಗ್ಗೆ ಪೊಲೀಸರು ಮತ್ತು ನಿಯಂತ್ರಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನೊಂದ ಪ್ರಯಾಣಿಕರ ಜತೆ ನಾವು ನಿರಂತರ ಸಂಪರ್ಕಸಲ್ಲಿದ್ದೇವೆ" ಎಂದು ಏರ್ ಇಂಡಿಯಾ ತಿಳಿಸಿದೆ.

ವಿಮಾನದ ಶೌಚಾಲಯದಲ್ಲಿ ಮಹಿಳೆ ತಮ್ಮ ದೇಹವನ್ನು ಸ್ವಚ್ಛಗೊಳಿಸಿಕೊಂಡ ಬಳಿಕ ವಿಮಾನದ ಸಿಬ್ಬಂದಿ ಆಕೆಗೆ ಪೈಜಾಮಾದ ಸೆಟ್ ಹಾಗೂ ಬಳಸಿ ಎಸೆಯಬಹುದಾದ ಚಪ್ಪಲಿಗಳನ್ನು ನೀಡಿದ್ದರು. ಕೆಟ್ಟ ವಾಸನೆ ಬರುತ್ತಿದ್ದ ಸೀಟಿಗೆ ಮರಳಲು ಬಯಸದ ಮಹಿಳೆ, ಶೌಚಾಲಯದಲ್ಲಿಯೇ ಸುಮಾರು 20 ನಿಮಿಷ ಕುಳಿದಿದ್ದರು.

ಸಿಬ್ಬಂದಿ ಕೂರುವ ಕಿರಿದಾದ ಸೀಟಲ್ಲಿ ಒಂದು ಗಂಟೆ ಕೂರಲು ಅವಕಾಶ ನೀಡಿದ ನಂತರ ತಮ್ಮ ಸೀಟಿಗೆ ಮರಳುವಂತೆ ಹೇಳಲಾಗಿತ್ತು. ಸಿಬ್ಬಂದಿಗೆ ಆಸನದ ಮೇಲೆ ಶೀಟ್ ಹಾಕಿದ್ದರೂ, ಆ ಜಾಗದಲ್ಲಿ ಮೂತ್ರದ ದುರ್ನಾತ ಹೊಡೆಯುತ್ತಿತ್ತು ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT