ತಾಯಿ ಹೀರಾಬೆನ್ ಜೊತೆ ಪ್ರಧಾನಿ ನರೇಂದ್ರ ಮೋದಿ 
ದೇಶ

ರಾಜ್‌ಕೋಟ್‌ನಲ್ಲಿರುವ ಡ್ಯಾಮ್‌ಗೆ ಪ್ರಧಾನಿ ಮೋದಿ ತಾಯಿ ಹೀರಾಬೆನ್ ಹೆಸರು

ಗುಜರಾತ್‌ನ ರಾಜ್‌ಕೋಟ್ ನಗರದ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ಚೆಕ್‌ಡ್ಯಾಮ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ದಿವಂಗತ ಹೀರಾಬೆನ್ ಅವರ ಹೆಸರನ್ನು ಇಡಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ರಾಜ್‌ಕೋಟ್‌: ಗುಜರಾತ್‌ನ ರಾಜ್‌ಕೋಟ್ ನಗರದ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ಚೆಕ್‌ಡ್ಯಾಮ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ದಿವಂಗತ ಹೀರಾಬೆನ್ ಅವರ ಹೆಸರನ್ನು ಇಡಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಗಿರ್ ಗಂಗಾ ಪರಿವಾರ ಟ್ರಸ್ಟ್‌, ರಾಜ್‌ಕೋಟ್-ಕಲವಾಡ ರಸ್ತೆಯ ವಗುಡಾದ್ ಗ್ರಾಮದ ಬಳಿ ನ್ಯಾರಿ ನದಿಗೆ ಅಡ್ಡವಾಗಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸುತ್ತಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ದಿಲೀಪ್ ಸಖಿಯಾ ಹೇಳಿದ್ದಾರೆ.

ಸ್ಥಳೀಯ ಶಾಸಕಿ ದರ್ಶಿತಾ ಶಾ ಮತ್ತು ರಾಜ್‌ಕೋಟ್ ಮೇಯರ್ ಪ್ರದೀಪ್ ದಾವ್ ಅವರ ಸಮ್ಮುಖದಲ್ಲಿ ಬುಧವಾರ ಅಣೆಕಟ್ಟಿನ ಶಿಲಾನ್ಯಾಸ ನೆರವೇರಿಸಲಾಯಿತು.

"ಪ್ರಧಾನಿ ಮೋದಿ ಅವರ ತಾಯಿಗೆ ಗೌರವಾರ್ಥವಾಗಿ ಈ ಚೆಕ್ ಡ್ಯಾಂಗೆ ಹೀರಾಬಾ ಸ್ಮೃತಿ ಸರೋವರ ಎಂದು ಹೆಸರಿಡಲು ನಾವು ನಿರ್ಧರಿಸಿದ್ದೇವೆ. ಏಕೆಂದರೆ ಇದನ್ನು ಅವರ ನೆನಪಿಗಾಗಿ ನಿರ್ಮಿಸಲಾಗುತ್ತಿದೆ. ಇದು ಇತರರಿಗೆ ಏನಾದರೂ ಮಾಡಲು ಅಥವಾ ಅವರ ಮರಣದ ನಂತರ ಒಳ್ಳೆಯ ಉದ್ದೇಶಕ್ಕಾಗಿ ದೇಣಿಗೆ ನೀಡಲು ಪ್ರೇರೇಪಿಸುತ್ತದೆ ಎಂದು" ಸಖಿಯಾ ಹೇಳಿದ್ದಾರೆ.

ಹೀರಾಬೆನ್ ಅವರು ಡಿಸೆಂಬರ್ 30 ರಂದು ಅಹಮದಾಬಾದ್‌ನ ಆಸ್ಪತ್ರೆಯಲ್ಲಿ 99 ನೇ ವಯಸ್ಸಿನಲ್ಲಿ ನಿಧನರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ