ದೇಶ

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿಯನ್ನು ಕೆಲಸದಿಂದ ಕಿತ್ತುಹಾಕಿದ ಅಮೆರಿಕ ಕಂಪನಿ

Lingaraj Badiger

ನವದೆಹಲಿ: ನ್ಯೂಯಾರ್ಕ್‌-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಶಂಕರ್ ಮಿಶ್ರಾ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಹಣಕಾಸು ಸೇವೆಗಳ ಕಂಪನಿ ವೆಲ್ಸ್ ಫಾರ್ಗೋ ಶುಕ್ರವಾರ ಹೇಳಿದೆ.

ತಮ್ಮ ಕಂಪನಿ ಉದ್ಯೋಗಿಯಾಗಿದ್ದ ಶಂಕರ್ ಮಿಶ್ರಾ  ವಿರುದ್ಧದ ಆರೋಪ ತುಂಬ 'ಆಳವಾಗಿ ಮನಸ್ಸನ್ನು ಕಲಕಿದೆ' ಎಂದು ವೆಲ್ಸ್ ಫಾರ್ಗೋ ಹೇಳಿದೆ.

'ಈ ವ್ಯಕ್ತಿಯನ್ನು ವೆಲ್ ಫಾರ್ಗೋದಿಂದ ವಜಾಗೊಳಿಸಲಾಗಿದೆ' ಎಂದು ಅಮೆರಿಕ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯು ತನ್ನ ಉದ್ಯೋಗಿಗಳಿಂದ ವೃತ್ತಿಪರ ಮತ್ತು ವೈಯಕ್ತಿಕ ಉತ್ತಮ ನಡವಳಿಕೆಯನ್ನು ಬಯಸುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಹೇಳಿದೆ.

ಕಳೆದ ನವೆಂಬರ್‌ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ-ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಶಂಕರ್ ಮಿಶ್ರಾ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

SCROLL FOR NEXT