ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ 
ದೇಶ

ಸ್ಪೀಡಾಗಿ ಬಂದ ಟ್ರಕ್ ಡಿಕ್ಕಿ ಹೊಡೆಯಿತು ಅನ್ನುವಷ್ಟರಲ್ಲಿ ಕ್ಷಣಾರ್ಧದಲ್ಲೇ ಪಾರಾದ ಬೈಕ್ ಸವಾರ! ವಿಡಿಯೋ

ವೇಗವಾಗಿ ಬಂದ ಟ್ರಕ್ ವೊಂದು ಇನ್ನೇನು ಡಿಕ್ಕಿ ಹೊಡೆಯಿತು ಅಂದುಕೊಳ್ಳುವಷ್ಟರಲ್ಲಿ  ಕ್ಷಣಾರ್ಧದಲ್ಲೇ ಕೂದಲೆಳೆ ಅಂತರದಿಂದ ಬೈಕ್ ಸವಾರ ಪಾರಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.  

ನವದೆಹಲಿ: ವೇಗವಾಗಿ ಬಂದ ಟ್ರಕ್ ವೊಂದು ಇನ್ನೇನು ಡಿಕ್ಕಿ ಹೊಡೆಯಿತು ಅಂದುಕೊಳ್ಳುವಷ್ಟರಲ್ಲಿ  ಕ್ಷಣಾರ್ಧದಲ್ಲೇ ಕೂದಲೆಳೆ ಅಂತರದಿಂದ ಬೈಕ್ ಸವಾರ ಪಾರಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.  

ಐಪಿಎಸ್ ಅಧಿಕಾರಿ ದಿಪಂಶು ಕಬ್ರಾ ಈ ಟ್ವೀಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇತಿ ಮಿತಿಯಾದ ಸ್ಪೀಡ್ ನಿರ್ವಹಿಸಿದರೆ ಅಪಘಾತಗಳು ಸಂಭವಿಸುವುದಿಲ್ಲ, ಇತರರು ಕೂಡಾ ಸುರಕ್ಷಿತವಾಗಿರುತ್ತಾರೇ, ನೀವು ಕೂಡಾ ಸುರಕ್ಷಿತರಾಗಿರುತ್ತೀರಾ ಎಂದು ಕಬ್ರಾ ಟ್ವೀಟ್ ಮಾಡಿದ್ದಾರೆ.  

ವಿಡಿಯೋದಲ್ಲಿ ಸ್ಪೀಡಾಗಿ ಬಂದ ಬೈಕ್ ಸವಾರ ಕ್ರಾಸ್ ಮಾಡುವಾಗ, ಭಾರಿ ಗಾತ್ರದ ಟ್ರಕ್ ವೊಂದು ವೇಗವಾಗಿ ಬಂದಿದೆ. ಇನ್ನೇನು ಬೈಕ್ ಗೆ ಅಪ್ಪಳಿಸಿತು ಅನ್ನುವಷ್ಟರಲ್ಲಿ ಅದೃಷ್ಟವಶಾತ್ ಸವಾರ ಅಪಾಯದಿಂದ ಪಾರಾಗಿದ್ದಾನೆ.

ಕಬ್ರಾ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆಯೇ ಟ್ವಿಟಿಗರ ಗಮನ ಸೆಳೆದಿದ್ದು, 90, 000 ಕ್ಕೂ ಹೆಚ್ಚು ವೀವ್ಹ್ ಹಾಗೂ 700ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!