ದೇಶ

ಗುಜರಾತ್‌ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ, 68 ರಾಷ್ಟ್ರಗಳು ಭಾಗಿ 

Nagaraja AB

ಅಹಮದಾಬಾದ್: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ 2023ಕ್ಕೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಭಾನುವಾರ ಚಾಲನೆ ನೀಡಿದರು. "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಜಿ-20 ಥೀಮ್ ಆಧಾರಿತವಾಗಿ 68 ರಾಷ್ಟ್ರಗಳ ಸುಮಾರು 125 ಗಾಳಿಪಟ ಹಾರಾಟಗಾರರು ಈ ಉತ್ಸವದ್ಲಿ ಪಾಲ್ಗೊಳ್ಳಲಿದ್ದಾರೆ.

ಜನವರಿ 14ರವರೆಗೂ ನಡೆಯಲಿರುವ ಈ ಉತ್ಸವದಲ್ಲಿ 14 ರಾಜ್ಯಗಳ 65 ಗಾಳಿಪಟ ಹಾರಾಟಗಾರರು ಹಾಗೂ ಗುಜರಾತಿನ ವಿವಿಧ ಕಡೆಗಳಿಂದ 660 ಗಾಳಿಪಟ ಹಾರಾಟಗಾರರು ಭಾಗವಹಿಸಲಿದ್ದಾರೆ.

ಸಾಬರಮತಿ ನದಿಯ ಮುಂಭಾಗದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಟೇಲ್, ಪ್ರಧಾನಿ ಮೋದಿ ಅವರ  ನಾಯಕತ್ವದಲ್ಲಿ ಗುಜರಾತ್‌ನ ಅಭಿವೃದ್ಧಿ ಎರಡು ದಶಕಗಳಿಂದಲೂ ಹೊಸ ಎತ್ತರವನ್ನು ಮುಟ್ಟಿದ್ದು,  ಗಾಳಿಪಟ ಉತ್ಸವ  ಹೊಸ ಎತ್ತರವನ್ನು ತಲುಪಲು ಒಂದು ಅವಕಾಶವಾಗಿದೆ. ಗಾಳಿಪಟಗಳು ಪ್ರಗತಿ, ಸಮೃದ್ಧಿಯ ಸಂಕೇತವಾಗಿದೆ ಎಂದು ಅವರು ಹೇಳಿದರು.

ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಗಾಳಿಪಟ ಉದ್ಯಮಕ್ಕೆ ಉತ್ತೇಜನ ಸಿಕ್ಕಿದ್ದು,  ಎರಡು ದಶಕಗಳ ಹಿಂದೆ 8-10 ಕೋಟಿ ರೂಪಾಯಿಗಳ ಉದ್ಯಮದಿಂದ ಆರಂಭವಾದ ಉದ್ಯಮ ರ 625 ಕೋಟಿ ರೂಪಾಯಿಗಳಿಗೆ ಬೆಳೆದಿದೆ ಮತ್ತು 1.30 ಲಕ್ಷ ಜನರಿಗೆ ಉದ್ಯೋಗ ನೀಡಿದೆ ಎಂದು ಪಟೇಲ್ ಹೇಳಿದರು. 

ಭಾರತವು ಮೊದಲ ಬಾರಿಗೆ ಜಿ -20  ರಾಷ್ಟ್ರಗಳ ಶೃಂಗಸಭೆಯನ್ನು ಆಯೋಜಿಸುತ್ತಿದೆ. ಪ್ರಧಾನಿ  ಜಾಗತಿಕ ವೇದಿಕೆಗಳಲ್ಲಿ ಭಾರತದ ವರ್ಚಸ್ಸನ್ನು ಬಲಗೊಳಿಸಿದ್ದರಿಂದ ಇದು ಸಾಧ್ಯವಾಗಿದೆ. ಜಿ-20 ಶೃಂಗಸಭೆಯ 15 ಸಭೆಗಳ ಆಯೋಜನೆಗೆ ಅವಕಾಶ ಸಿಕ್ಕಿರುವುದು ಗುಜರಾತಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು,

SCROLL FOR NEXT