ದೇಶ

ಹೀಟರ್ ಹಾಕಿಕೊಂಡು ಮಲಗಿದ್ದ ಕುಟುಂಬ; ಉಸಿರುಗಟ್ಟಿ ಪತಿ, ಪತ್ನಿ, ಇಬ್ಬರು ಮಕ್ಕಳು ಸೇರಿ ನಾಲ್ವರ ದುರ್ಮರಣ!

ಸೀತಾಪುರ ಜಿಲ್ಲೆಯ ಬಿಸ್ವಾನ್ ಪ್ರದೇಶದಲ್ಲಿ ಚಳಿ ತಡೆಯಲು ಹೀಟರ್ ಹಾಕಿಕೊಂಡು ಕುಟುಂಬವೊಂದು ಬೆಳಗಾಗುವ ಒಳಗಾಗಿ ಮೃತಪಟ್ಟಿದೆ.

ಸೀತಾಪುರ(ಉತ್ತರ ಪ್ರದೇಶ): ಸೀತಾಪುರ ಜಿಲ್ಲೆಯ ಬಿಸ್ವಾನ್ ಪ್ರದೇಶದಲ್ಲಿ ಚಳಿ ತಡೆಯಲು ಹೀಟರ್ ಹಾಕಿಕೊಂಡು ಕುಟುಂಬವೊಂದು ಬೆಳಗಾಗುವ ಒಳಗಾಗಿ ಮೃತಪಟ್ಟಿದೆ. 

ಹೀಟರ್ ನ ವಿಷಕಾರಿ ಅನಿಲವನ್ನು ಸೇವಿಸಿ ಮದ್ರಸಾ ಶಿಕ್ಷಕ 32 ವರ್ಷದ ಆಸಿಫ್, ಅವರ ಪತ್ನಿ 30 ವರ್ಷದ ಶಗುಫ್ತಾ ಮತ್ತು ಅವರ ಮಕ್ಕಳಾದ 3 ವರ್ಷದ ಝೈದ್ ಮತ್ತು 2 ವರ್ಷದ ಮೈರಾ ಮೃತ ದುರ್ದೈವಿಗಳು.

ಶನಿವಾರ ರಾತ್ರಿ ಆಸಿಫ್ ಹಾಗೂ ಆತನ ಕುಟುಂಬ ತೀವ್ರ ಚಳಿಯ ನಡುವೆ ಗ್ಯಾಸ್ ಪೆಟ್ರೋಮ್ಯಾಕ್ಸ್ ಹಚ್ಚಿ ಕೊಠಡಿಯಲ್ಲಿ ಮಲಗಿದ್ದು, ಇದರಿಂದ ಉಸಿರುಗಟ್ಟಿ ಇಡೀ ಕುಟುಂಬ ಸಾವನ್ನಪ್ಪಿದೆ ಎಂದು ಪೊಲೀಸ್ ಅಧಿಕಾರಿ ಬಿಸ್ವಾ ಅಭಿಷೇಕ್ ಪ್ರತಾಪ್ ತಿಳಿಸಿದ್ದಾರೆ.

ಬೆಳಗ್ಗೆ ಹಾಲಿನ ವ್ಯಾಪಾರಿ ಬಾಗಿಲು ತಟ್ಟಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈ ಬಗ್ಗೆ ಅನುಮಾನಗೊಂಡ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಗಿಲು ಒಡೆದು ನೋಡಿದಾಗ ಆಸಿಫ್, ಅವರ ಪತ್ನಿ ಮತ್ತು ಮಕ್ಕಳಿಬ್ಬರ ಶವಗಳು ಒಳಗಿನ ಹಾಸಿಗೆಯ ಮೇಲೆ ಪತ್ತೆಯಾಗಿವೆ ಎಂದು ಅವರು ಹೇಳಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಸ್ಥಳೀಯರ ಪ್ರಕಾರ, ನಾಲ್ವರು ಕುಟುಂಬ ಸದಸ್ಯರು ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು. ಘಟನೆಯ ಬಗ್ಗೆ ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಲ್ಲರನ್ನೂ ಆಂಬ್ಯುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಎಲ್ಲರೂ ಮೃತಪಟ್ಟಿರುವುದಾಗಿ ಘೋಷಿಸಿದರು. ವೈದ್ಯರ ಪ್ರಕಾರ, ಅವರು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT