ಅಮೃತಸರ: ಭಾರತ್ ಜೋಡೋ ಯಾತ್ರೆ ಪಂಜಾಬ್ ಪ್ರವೇಶಿಸುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಅಮೃತಸರದ ಶ್ರೀ ಹರ್ಮಂದಿರ್ ಸಾಹಿಬ್(ಗೋಲ್ಡನ್ ಟೆಂಪಲ್)ಗೆ ಭೇಟಿ ನೀಡಿದರು.
ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಬೆಳಗ್ಗೆ ಹರಿಯಾಣದ ಅಂಬಾಲಾದಲ್ಲಿ ದಟ್ಟವಾದ ಮಂಜು ಮತ್ತು ಕೊರೆಯುವ ಚಳಿಯ ನಡುವೆ ಭಾರತ್ ಜೋಡೋ ಯಾತ್ರೆಯನ್ನು ಪುನರಾರಂಭಿಸಿದರು. ಮಧ್ಯಾಹ್ನ ಪಂಜಾಬ್ ಪ್ರವೇಶಿಸುತ್ತಿದ್ದಂತೆ ಗೋಲ್ಡನ್ ಟೆಂಪಲ್ ಗೆ ಭೇಟಿ ನೀಡಿದರು.
ಇದನ್ನು ಓದಿ: ಖಾಕಿ ಚಡ್ಡಿ ಧರಿಸಿ ಲಾಠಿ ಹಿಡಿದಿರುತ್ತಾರೆ 21ನೇ ಶತಮಾನದ ಕೌರವರು : ಆರ್ಎಸ್ಎಸ್ ವಿರುದ್ಧ ರಾಹುಲ್ ವಾಗ್ದಾಳಿ
ಸೋಮವಾರ, ಭಾರತ್ ಜೋಡೋ ಯಾತ್ರೆಯನ್ನು ಮಹಿಳೆಯರು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಸಮರ್ಪಿಸಲಾಗಿತ್ತು.
ಪಂಜಾಬ್ ನಂತರ, ಭಾರತ್ ಜೋಡೋ ಯಾತ್ರೆಯು ಹಿಮಾಚಲ ಪ್ರದೇಶದಲ್ಲಿ ಸ್ವಲ್ಪ ಸಮಯ ಸಾಗಿ ಜನವರಿ 20 ರಂದು ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಲಿದೆ.
ಜನವರಿ 30 ರಂದು ಶ್ರೀನಗರದಲ್ಲಿ ತ್ರಿವರ್ಣ ಧ್ವಜಾರೋಹಣದೊಂದಿಗೆ ಯಾತ್ರೆ ಕೊನೆಗೊಳ್ಳಲಿದೆ.