ದೇಶ

ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್‌ಗೆ 3 ತಿಂಗಳ ಜೈಲು ಶಿಕ್ಷೆ

Ramyashree GN

ಸುಲ್ತಾನಪುರ: ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕ ಅನೂಪ್ ಸಂದಾ ಸೇರಿದಂತೆ ಐವರಿಗೆ ಸುಲ್ತಾನ್‌ಪುರ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ನ್ಯಾಯಾಲಯ ಅವರಿಗೆ ತಲಾ 1,500 ರೂಪಾಯಿ ದಂಡವನ್ನೂ ವಿಧಿಸಿದೆ.

2001ರ ಜೂನ್ 19ರಂದು ದಾಖಲಾದ 21 ವರ್ಷಗಳ ಹಳೆಯ ಪ್ರಕರಣದಲ್ಲಿ ಸಂಸದ-ಶಾಸಕ ನ್ಯಾಯಾಲಯವು ತೀರ್ಪು ಪ್ರಕಟಿಸಿತು.

ಪೊಲೀಸರ ಪ್ರಕಾರ, ಇವರು ರಸ್ತೆ ತಡೆದು ರಾಜನಾಥ್ ಸಿಂಗ್ ನೇತೃತ್ವದ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದರು. ಸುಲ್ತಾನಪುರ ನಗರದಲ್ಲಿ ನಿಯಮಿತ ವಿದ್ಯುತ್ ಕಡಿತ ಮತ್ತು ಅಸಮರ್ಪಕ ನೀರು ಸರಬರಾಜು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.

ಸಂಜಯ್ ಸಿಂಗ್, ಅನೂಪ್ ಸಂದಾ, ಬೆಂಬಲಿಗರಾದ ವಿಜಯ್ ಕುಮಾರ್, ಕಮಲ್ ಶ್ರೀವಾಸ್ತವ, ಸಂತೋಷ್ ಕುಮಾರ್ ಮತ್ತು ಸುಭಾಷ್ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಸರ್ಕಾರಿ ವಕೀಲ ವೈಭವ್ ಪಾಂಡೆ ತಿಳಿಸಿದ್ದಾರೆ.

ತೀರ್ಪು ಪ್ರಕಟವಾಗುತ್ತಿರುವಾಗ ನ್ಯಾಯಾಲಯದಲ್ಲಿ ಹಾಜರಿದ್ದ ಸಿಂಗ್, ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದರೂ ಆಗಿನ ಬಿಜೆಪಿ ಸರ್ಕಾರದ ದುರಾಡಳಿತವನ್ನು ದೂಷಿಸಿದರು. ಶಿಕ್ಷೆಯ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದರು.

SCROLL FOR NEXT