ದೇಶ

ನ್ಯಾಯಾಂಗದ ಮೇಲೆ ಅಸಾಧಾರಣ ದಾಳಿ: ಉಪ ರಾಷ್ಟ್ರಪತಿ ಧಂಕರ್ ಹೇಳಿಕೆಗೆ ಕಾಂಗ್ರೆಸ್ ಕಿಡಿ

Lingaraj Badiger

ನವದೆಹಲಿ: 1973ರ ಕೇಶವಾನಂದ ಭಾರತಿ ಪ್ರಕರಣದ ತೀರ್ಪನ್ನು ಪ್ರಶ್ನಿಸಿ ಉಪ ರಾಷ್ಟ್ರಪತಿ ಜಗದೀಪ್ ಧಂಕರ್ ಅವರು ನೀಡಿರುವ ಹೇಳಿಕೆ "ನ್ಯಾಯಾಂಗದ ಮೇಲೆ ನಡೆದ ಅಸಾಧಾರಣ ದಾಳಿ" ಎಂದು ಕಾಂಗ್ರೆಸ್ ಗುರುವಾರ ಆಕ್ರೋಶ ವ್ಯಕ್ತಪಡಿಸಿದೆ.

ಉಪರಾಷ್ಟ್ರಪತಿ ಧಂಕರ್ ಅವರು 2015 ರಲ್ಲಿ ಎನ್‌ಜೆಎಸಿ ಕಾಯ್ದೆ ರದ್ದುಗೊಳಿಸಿರುವುದನ್ನು ಟೀಕಿಸಿದ್ದಾರೆ ಮತ್ತು ಕೇಶವಾನಂದ ಭಾರತಿ ಪ್ರಕರಣದ ತೀರ್ಪನ್ನು ಪ್ರಶ್ನಿಸಿದ್ದಾರೆ. ಸಂಸತ್ತು ಸಂವಿಧಾನವನ್ನು ತಿದ್ದುಪಡಿ ಮಾಡಬಹುದು, ಆದರೆ ಅದರ ಮೂಲ ರಚನೆಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಕೋರ್ಟ್‌ನ ಮೇಲೆ ತುಂಬು ಗೌರವದಿಂದಲೇ, ನಾನು ಇದನ್ನು ಒಪ್ಪೋದಿಲ್ಲ ಎಂದು ಧಂಕರ್ ಹೇಳಿದ್ದರು.

"ನಾನು 18 ವರ್ಷಗಳಿಂದ ಸಂಸದನಾಗಿದ್ದೇನೆ. ಆದರೆ 1973 ರ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಯಾರೂ ಟೀಕಿಸಿಲ್ಲ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟ್ವೀಟ್‌ ಮಾಡಿದ್ದಾರೆ.

"ವಾಸ್ತವವಾಗಿ, ಅರುಣ್ ಜೇಟ್ಲಿಯಂತಹ ಬಿಜೆಪಿಯ ಕಾನೂನು ದಿಗ್ಗಜರು ಸಹ ಈ ತೀರ್ಪನ್ನು ಒಂದು ಮೈಲಿಗಲ್ಲು ಎಂದು ಶ್ಲಾಘಿಸಿದ್ದಾರೆ. ಈಗ, ರಾಜ್ಯಸಭಾ ಅಧ್ಯಕ್ಷರು ಇದು ತಪ್ಪು ಎಂದು ಹೇಳುತ್ತಾರೆ. ಇದು ನ್ಯಾಯಾಂಗದ ಮೇಲೆ ಅಸಾಧಾರಣ ದಾಳಿ!" ಎಂದು ಅವರು ಕಾಂಗ್ರೆಸ್ ನಾಯಕ ಟ್ವೀಟ್ ಮಾಡಿದ್ದಾರೆ.

SCROLL FOR NEXT