ದೇಶ

ನಕಲಿ, ಸುಳ್ಳು ಸುದ್ದಿಗಳನ್ನು ಹರಡುವ ಯೂಟ್ಯೂಬ್ ಚಾನೆಲ್ ಗಳನ್ನು ಭೇದಿಸಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ

Sumana Upadhyaya

ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಕಲಿ ಯೂಟ್ಯೂಬ್ ಚಾನೆಲ್‌ಗಳ ಮೇಲೆ ಕಡಿವಾಣ ಹಾಕಲು ಮುಂದಾಗಿದೆ. 

ನಕಲಿ ಚಾನೆಲ್ ಗಳು ನಕಲಿ ಸುದ್ದಿ ಆರ್ಥಿಕತೆಯ ಭಾಗವಾಗಿದೆ. ಚಾನಲ್‌ಗಳು ಜನರನ್ನು ತಪ್ಪುದಾರಿಗೆಳೆಯಲು ಟಿವಿ ಚಾನೆಲ್‌ಗಳ, ದೂರದರ್ಶನ ಸುದ್ದಿ ನಿರೂಪಕರ ನಕಲಿ, ಕ್ಲಿಕ್‌ಬೈಟ್ ಮತ್ತು ಸಂವೇದನೆಯ ಥಂಬ್‌ನೇಲ್‌ಗಳು ಮತ್ತು ಚಿತ್ರಗಳನ್ನು ಬಳಸುತ್ತವೆ ಎಂದು ಮಾಹಿತಿ ಸಚಿವಾಲಯ ಮನಗಂಡಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪಿಐಬಿ ಫ್ಯಾಕ್ಟ್ ಚೆಕ್ ಯುನಿಟ್ (ಎಫ್‌ಸಿಯು) ಭಾರತದಲ್ಲಿ ಸುಳ್ಳು ಮಾಹಿತಿಯನ್ನು ಹರಡುತ್ತಿರುವ ಆರು ಯೂಟ್ಯೂಬ್ ಚಾನೆಲ್‌ಗಳನ್ನು ಭೇದಿಸಿದೆ. ಈ ಚಾನೆಲ್‌ಗಳು ಹರಡುವ ನಕಲಿ ಸುದ್ದಿಗಳನ್ನು ಎದುರಿಸಲು 100 ಕ್ಕೂ ಹೆಚ್ಚು ಸತ್ಯ ತಪಾಸಣೆಗಳನ್ನು ಹೊಂದಿರುವ ಆರು ಪ್ರತ್ಯೇಕ ಟ್ವಿಟರ್ ಥ್ರೆಡ್‌ಗಳನ್ನು ಫ್ಯಾಕ್ಟ್ ಚೆಕ್ ಯುನಿಟ್ ಬಿಡುಗಡೆ ಮಾಡಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಇಡೀ ಚಾನೆಲ್‌ಗಳನ್ನು ಸ್ಥಗಿತಗೊಳಿಸಿದ ಘಟಕದಿಂದ ಇದು ಎರಡನೇ ರೀತಿಯ ಕ್ರಮವಾಗಿದೆ.

ಆರು ಯೂಟ್ಯೂಬ್ ಚಾನೆಲ್‌ಗಳು ಸಂಘಟಿತ ತಪ್ಪು ಮಾಹಿತಿ ನೆಟ್‌ವರ್ಕ್‌ನ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ, ಸುಮಾರು 20 ಲಕ್ಷ ಚಂದಾದಾರರನ್ನು ಹೊಂದಿವೆ. ವೀಡಿಯೊಗಳನ್ನು 51 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ YouTube ಚಾನಲ್‌ಗಳ ವಿವರಗಳನ್ನು ಪಬ್ಲಿಕ್ ಇನ್ಫರ್ಮೇಷನ್ ಬ್ಯೂರೋ -PIB ಮೂಲಕ ಪರಿಶೀಲಿಸಲಾಗಿದೆ:

SCROLL FOR NEXT