ದೇಶ

ಕೇರಳ: ಇನ್ಮುಂದೆ ಶಾಲೆಗಳಲ್ಲಿ ಶಿಕ್ಷಕರನ್ನು 'ಸರ್, ಮೇಡಂ ಅನ್ನುವಂತಿಲ್ಲ! ಮಕ್ಕಳ ಹಕ್ಕುಗಳ ಆಯೋಗ ಸೂಚನೆ

Nagaraja AB

ತಿರುವನಂತಪುರಂ: ಕೇರಳದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರನ್ನು ಸರ್, ಮೇಡಂ ಅನ್ನುವಂತಿಲ್ಲ. ಬದಲಿಗೆ ಟೀಚರ್ ಎಂದು ಕರೆಯುವಂತೆ ಅಲ್ಲಿನ ಮಕ್ಕಳ ಹಕ್ಕುಗಳ ಆಯೋಗ ಸೂಚನೆ ನೀಡಿದೆ.

ಸರ್, ಮೇಡಂ ಅನ್ನುವುದಕ್ಕಿಂತ ಟೀಚರ್ ಪದ ಲಿಂಗ ತಟಸ್ಥವಾಗಿರುವುದರಿಂದ ಹೀಗೆ ಕರೆಯಬೇಕು ಎಂದು ಸೂಚಿಸಲಾಗಿದೆ. ಅಲ್ಲದೇ , ಶಿಕ್ಷಕರು ಕೂಡಾ ಈ ಪದಗಳನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು ಎಂದು ನಿರ್ದೇಶಿಸಿದೆ.

ಕೇರಳ ರಾಜ್ಯ ಮಕ್ಕಳ ಆಯೋಗದ ಮುಖ್ಯಸ್ಥರಾದ ಕೆ. ವಿ. ಮನೋಜ್ ಕುಮಾರ್ ಹಾಗೂ ಸದಸ್ಯ ಸಿ. ವಿಜಯ್ ಕುಮಾರ್ , ಶಿಕ್ಷಣ ಇಲಾಖೆಗೆ ಈ ನಿರ್ದೇಶನ ನೀಡಿದ್ದಾರೆ. ಸಮಾನತೆ ಹಾಗೂ ಶಿಕ್ಷಕರೊಂದಿಗೆ ಬಾಂಧವ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.

SCROLL FOR NEXT