ದೇಶ

ಭಾರತೀಯ ಸೇನೆಗೆ 'ಇಂಡಿಯನ್ ನ್ಯಾಷನಲ್ ಆರ್ಮಿ' ಎಂದು ಮರುನಾಮಕರಣ ಮಾಡಿ: ಕೇಂದ್ರಕ್ಕೆ ನೇತಾಜಿ ಮೊಮ್ಮಗ ಮನವಿ

Lingaraj Badiger

ನವದೆಹಲಿ: ಜನವರಿ 23 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನೇತಾಜಿ ಅವರ ಮೊಮ್ಮಗ ಮತ್ತು ಪಶ್ಚಿಮ ಬಂಗಾಳ ಬಿಜೆಪಿ ಹಿರಿಯ ನಾಯಕ ಚಂದ್ರ ಕುಮಾರ್ ಬೋಸ್ ಅವರು ಭಾರತೀಯ ಸೇನೆಗೆ ಇಂಡಿಯನ್ ನ್ಯಾಷನಲ್ ಆರ್ಮಿ(ಐಎನ್‌ಎ) ಎಂದು ಮರುನಾಮಕರಣ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಜಪಾನ್‌ನಿಂದ ನೇತಾಜಿಯ ಅವಶೇಷಗಳನ್ನು ವಾಪಸ್ ತರಬೇಕು. ಟೋಕಿಯೊದ ರೆಂಕೋಜಿ ಬೌದ್ಧ ಮಂದಿರದಿಂದ ನೇತಾಜಿಯವರ ಪವಿತ್ರ ಅಸ್ಥಿಯನ್ನು ಭಾರತಕ್ಕೆ ತರಬೇಕು ಎಂದು ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ತಮ್ಮ ಬೇಡಿಕೆಗಳನ್ನು ಹಂಚಿಕೊಂಡ ಬೋಸ್, ಭಾರತೀಯ ಸೇನೆಗೆ 'ಇಂಡಿಯನ್ ನ್ಯಾಷನಲ್ ಆರ್ಮಿ' ಎಂದು ಮರುನಾಮಕರಣ ಮಾಡುವುದರಿಂದ ಲಿಬರೇಶನ್ ಆರ್ಮಿ ಆಫ್ ಇಂಡಿಯಾದ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದರು.

ಟೋಕಿಯೊದ ರೆಂಕೋಜಿ ದೇವಸ್ಥಾನದಲ್ಲಿ ಸಂರಕ್ಷಿಸಲಾಗಿರುವ ಅವಶೇಷಗಳು ನೇತಾಜಿಯವರದೇ ಎಂಬುದಕ್ಕೆ ಡಿಕ್ಲಾಸಿಫೈಡ್ ಫೈಲ್‌ಗಳೊಂದಿಗೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಆದ್ದರಿಂದ, ಆ ಬಗ್ಗೆ ಹೆಚ್ಚಿನ ಪರೀಕ್ಷೆಯ ಅಗತ್ಯವಿಲ್ಲ. ಅವರ ಅಸ್ಥಿಯನ್ನು ಭಾರತಕ್ಕೆ ತರಬೇಕು'' ಎಂದು ಚಂದ್ರ ಕುಮಾರ್ ಬೋಸ್ ಹೇಳಿದ್ದಾರೆ.

ಮೋದಿ ಸರ್ಕಾರವು ಜನವರಿ 23 ರಂದು ದೇಶಾದ್ಯಂತ ನೇತಾಜಿ ಅವರ ಜನ್ಮದಿನವನ್ನು ಆಚರಿಸುತ್ತಿದೆ.

SCROLL FOR NEXT