ದೇಶ

ಪಂಜಾಬ್ ಸಿಎಂ ಭಗವಂತ್ ಮಾನ್ ಯಾರೊಬ್ಬರ ರಿಮೋಟ್ ಕಂಟ್ರೋಲ್ ಆಗಬಾರದು: ರಾಹುಲ್ ಗಾಂಧಿ

Lingaraj Badiger

ಹೋಶಿಯಾರ್ಪುರ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಪಂಜಾಬ್ ಸಿಎಂ ಯಾರೊಬ್ಬರ ರಿಮೋಟ್ ಕಂಟ್ರೋಲ್‌ ಆಗಬಾರದು ಮತ್ತು ರಾಜ್ಯವನ್ನು ಸ್ವತಂತ್ರವಾಗಿ ನಡೆಸಬೇಕು ಎಂದು ಸೋಮವಾರ ಹೇಳಿದ್ದಾರೆ.

ಹೋಶಿಯಾರ್ಪುರದಲ್ಲಿ ಇಂದು ಭಾರತ್ ಜೋಡೋ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ಪಂಜಾಬ್ ಅನ್ನು ಪಂಜಾಬ್‌ನಿಂದಲೇ ನಡೆಸಬೇಕು. ಅದನ್ನು ದೆಹಲಿಯಿಂದ ನಡೆಸಬಾರದು ಎಂದು ಹೇಳಿದರು. 

ನಾನು ಪಂಜಾಬ್ ಸಿಎಂ ಭಗವಂತ್ ಮಾನ್ ಅವರನ್ನು ಕೇಳಲು ಬಯಸುತ್ತೇನೆ ನೀವು ಪಂಜಾಬ್‌ನ ಮುಖ್ಯಮಂತ್ರಿ, ಪಂಜಾಬ್ ನಲ್ಲಿ ನೀವೇ ಅಧಿಕಾರ ಚಲಾಯಿಸಬೇಕು. ಭಗವಂತ್ ಮಾನ್ (ಅರವಿಂದ್) ಕೇಜ್ರಿವಾಲ್ ಜಿ ಮತ್ತು ದೆಹಲಿಯ ಒತ್ತಡಕ್ಕೆ ಒಳಗಾಗಬಾರದು" ಎಂದರು.

"ನೀವು ಸ್ವತಂತ್ರವಾಗಿ ಕೆಲಸ ಮಾಡಬೇಕು ಮತ್ತು ಯಾರೊಬ್ಬರ ರಿಮೋಟ್ ಕಂಟ್ರೋಲ್ ಅಡಿಯಲ್ಲಿ ಇರಬಾರದು" ಎಂದು ರಾಹುಲ್ ಗಾಂಧಿ ಹೇಳಿದರು.

ಭಗವಂತ್ ಮಾನ್ ಅವರ ಸರ್ಕಾರದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತೆಗೆದುಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.

SCROLL FOR NEXT