ದೇಶ

ಗಣರಾಜ್ಯೋತ್ಸವ ಹಿನ್ನೆಲೆ, ರಾಷ್ಟ್ರ ರಾಜಧಾನಿಯಲ್ಲಿ ನಾಲ್ವರು ಶಂಕಿತ ಉಗ್ರರಿಗಾಗಿ ತೀವ್ರ ಶೋಧ

Nagaraja AB

ನವದೆಹಲಿ: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಇತರ ನಾಲ್ವರು ಉಗ್ರರಿಗಾಗಿ ದೆಹಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಮೂಲಗಳು ಮಂಗಳವಾರ ಹೇಳಿವೆ. ಕಳೆದ ವಾರ ಜಹಂಗೀರ್ ಪುರಿ ಪ್ರದೇಶದಲ್ಲಿ ಇಬ್ಬರು  ಶಂಕಿತರನ್ನು ಬಂಧಿಸಲಾಗಿತ್ತು.

ಶಂಕಿತ ಉಗ್ರರು ಪಾಕಿಸ್ತಾನದಿಂದ ಶಸಾಸ್ತ್ರಗಳನ್ನು ಪಡೆದಿದ್ದು, ಸಾಮಾಜಿಕ ಮಾಧ್ಯಮ ಆ್ಯಪ್ ಗಳ ಮೂಲಕ ಗಡಿಯಲ್ಲಿರುವ ಪಾಕ್ ಕಡೆಯ ನಿರ್ವಹಣೆದಾರರೊಂದಿಗೆ ಸಂಪರ್ಕದಲ್ಲಿರುವುದಾಗಿ ದೆಹಲಿ ಪೊಲೀಸ್ ವಿಶೇಷ ಘಟಕದ ಮೂಲಗಳು ತಿಳಿಸಿವೆ. ದೆಹಲಿ ಪೊಲೀಸರು ಇತರ ನಾಲ್ವರು ಶಂಕಿತ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅವರು ಉತ್ತರಾಖಂಡ್ ನ ಅಪರಿಚಿತ ಸ್ಥಳದಲ್ಲಿ ಶಸಾಸ್ತ್ರಗಳನ್ನು ಪಡೆದಿದ್ದು, ಸ್ಥಳ ಪರಿಶೀಲನೆ ಕಾರ್ಯ ನಡೆದಿದೆ ಎನ್ನಲಾಗಿದೆ. 

ಕಳೆದ ವಾರ ಜಹಂಗೀರ್ ಪುರಿ ಪ್ರದೇಶದಲ್ಲಿ ಇಬ್ಬರು ಶಂಕಿತ ನಕ್ಸರನ್ನು ಬಂಧಿಸಿದ ನಂತರ ಈ ಬೆಳವಣಿಗೆ ನಡೆದಿದೆ. ವಿವಿಧ ಜಿಲ್ಲೆಗಳಲ್ಲಿ ದಾಳಿ ಗುರಿಯ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಹೊಸ ಬೆಳವಣಿಗೆಯಲ್ಲಿ 8 ವ್ಯಕ್ತಿಗಳು ಈ ಸಂಚಿನಲ್ಲಿಇರುವುದಾಗಿ ದೆಹಲಿ ಪೊಲೀಸರು ಮಾಹಿತಿ ಪಡೆದಿದ್ದಾರೆ. ಪ್ರಸ್ತುತ ನಾಲ್ವರು ಶಂಕಿತರು ಭಾರತದಲ್ಲಿ ಕಾಣಿಸಿಕೊಂಡಿರುವ ಸಾಧ್ಯತೆಯಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. 

ಈ ಶಂಕಿತ ಉಗ್ರರ ನಿರ್ವಹಣೆ ಮಾಡುತ್ತಿರುವವರು ಗಡಿಯಲ್ಲಿ ಕುಳಿತು ಸಿಗ್ನಲ್ ಆ್ಯಪ್ ನಲ್ಲಿ ಸೂಚನೆ ನೀಡುತ್ತಿದ್ದಾರೆ. ನಂತರ ಉಗ್ರರು ಕಳಿಸುತ್ತಿರುವ ಲೋಕೇಶನ್ ಗೆ  ಗೂಗಲ್ ಮ್ಯಾಪ್ ಮೂಲಕ ಬ್ಯಾಗ್ ನಲ್ಲಿ ಶಸಾಸ್ತ್ರಗಳನ್ನು ಪೂರೈಸಲಾಗುತ್ತಿದೆ. ಇಬ್ಬರು ಉಗ್ರರನ್ನು ಶಸಾಸ್ತ್ರ ಪೂರೈಸಲು ಬಳಸಲಾಗುತ್ತಿದೆ. ಇನ್ನಿಬ್ಬರನ್ನು ಗೂಗಲ್ ಲೋಕೇಶನ್ ಹತ್ತಿರ ಕಳುಹಿಸಲು ಬಳಸಲಾಗುತ್ತಿದೆ ಎಂದು ಮೂಗಳು ಹೇಳಿವೆ. 
 

SCROLL FOR NEXT