ಅಮಿತಾಬ್ ಕಾಂತ್ 
ದೇಶ

ನೀರಿನ ಬಳಕೆ ಕಡಿಮೆ ಮಾಡಲು ರೈತರು ಭತ್ತದ ಬದಲು ಸಿರಿಧಾನ್ಯ ಬೆಳೆಯಬೇಕು: ಅಮಿತಾಬ್ ಕಾಂತ್

ಹೆಚ್ಚಿನ ನೀರಿನ ಬಳಕೆಯನ್ನು ಕಡಿಮೆ ಮಾಡಲು ಭಾರತೀಯ ರೈತರು ಭತ್ತದ ಬದಲು ಸಿರಿಧಾನ್ಯ ಕೃಷಿಗೆ ಬದಲಾಗಬೇಕಾಗಿದೆ ಕೇಂದ್ರದ ಪ್ರಮುಖ ಪೋಷಣ ಅಭಿಯಾನದಲ್ಲಿ ಸಿರಿಧಾನ್ಯ ಮಾತ್ರ ನೀಡಬೇಕು...

ನವದೆಹಲಿ: ಹೆಚ್ಚಿನ ನೀರಿನ ಬಳಕೆಯನ್ನು ಕಡಿಮೆ ಮಾಡಲು ಭಾರತೀಯ ರೈತರು ಭತ್ತದ ಬದಲು ಸಿರಿಧಾನ್ಯ ಕೃಷಿಗೆ ಬದಲಾಗಬೇಕಾಗಿದೆ ಕೇಂದ್ರದ ಪ್ರಮುಖ ಪೋಷಣ ಅಭಿಯಾನದಲ್ಲಿ ಸಿರಿಧಾನ್ಯ ಮಾತ್ರ ನೀಡಬೇಕು ಎಂದು ಭಾರತದ ಜಿ20 ಶೆರ್ಪಾ ಅಮಿತಾಬ್ ಕಾಂತ್ ಅವರು ಬುಧವಾರ ಹೇಳಿದ್ದಾರೆ.

ಉದ್ಯಮ ಸಂಸ್ಥೆ ಸಿಐಐ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಂತ್, ಸಿರಿಧಾನ್ಯಗಳು ಪೌಷ್ಟಿಕಾಂಶ ವಿಶೇಷವಾಗಿ ಪ್ರೋಟೀನ್ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಹೆಚ್ಚು ಹೊಂದಿವೆ. ದೇಶದಲ್ಲಿ ಸಿರಿಧಾನ್ಯ ಸೇವನೆಯನ್ನು ಉತ್ತೇಜಿಸಬೇಕು ಎಂದಿದ್ದಾರೆ.

"ಭಾರತವು ಭತ್ತ ಮತ್ತು ಗೋಧಿ ಕೃಷಿಯಿಂದ ದೂರ ಸರಿಯಬೇಕು ಮತ್ತು ಹೆಚ್ಚು ಹೆಚ್ಚು ಸಿರಿಧಾನ್ಯಗಳನ್ನು ಉತ್ಪಾದಿಸಿ ರಫ್ತು ಮಾಡಬೇಕಾಗಿದೆ. ಸಿರಿಧಾನ್ಯ ಕೃಷಿಯು ನೀರನ್ನು ಉಳಿಸಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದ್ದಾರೆ.

ಸಿರಿಧಾನ್ಯ ಭಾರತದ ಸೂಪರ್‌ಫುಡ್ ಮಾಡುವಲ್ಲಿ ಖಾಸಗಿ ವಲಯವು ಪ್ರಮುಖ ಪಾತ್ರ ವಹಿಸುವ ಅಗತ್ಯವಿದೆ. ಕೇಂದ್ರ ಸರ್ಕಾರದ ಎಲ್ಲಾ ಪೋಷಣ ಅಭಿಯಾನ ಯೋಜನೆಗಳಲ್ಲಿ ಸಿರಿಧಾನ್ಯವನ್ನು ಮಾತ್ರ ನೀಡಬೇಕು ಎಂದು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran conflict: ರಿಯಾದ್‌ ಅಮೆರಿಕಾ ರಾಯಭಾರಿ ಕಚೇರಿ ಮೇಲೆ ಡ್ರೋನ್ ದಾಳಿ: ಸ್ಫೋಟದ ಶಬ್ಧಕ್ಕೆ ಬೆಚ್ಚಿಬಿದ್ದ ಸೌದಿ; ಶೀಘ್ರದಲ್ಲೇ ತಕ್ಕ ಪ್ರತಿಕ್ರಿಯೆ- ಟ್ರಂಪ್ ಎಚ್ಚರಿಕೆ

ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ್ದೇಕೆ?: ಕಾರಣ ನೀಡಿದ Donald Trump

US-Israel-Iran War: ಕನ್ನಡಿಗರ ಸುರಕ್ಷಿತ ವಾಪಸಾತಿಗೆ ಕ್ರಮ; ಕೇಂದ್ರ ಸರ್ಕಾರ ಭರವಸೆ

West Asia conflict: ಇರಾನ್ ಮೇಲಿನ ಯುದ್ಧ ಇನ್ನು 4-5 ವಾರಗಳ ಕಾಲ ನಡೆಯಲಿದೆ- ಡೊನಾಲ್ಡ್ ಟ್ರಂಪ್

ಇದು ಅಂತ್ಯವಿಲ್ಲದ ಯುದ್ಧವಲ್ಲ; ಯುದ್ಧ ಶುರು ಮಾಡಿದ್ದು ಇರಾನ್, ನಾವು ಮುಗಿಸುತ್ತೇವೆ: ಅಮೆರಿಕ ರಕ್ಷಣಾ ಕಾರ್ಯದರ್ಶಿ!

SCROLL FOR NEXT