ಪ್ರಾತಿನಿಧಿಕ ಚಿತ್ರ 
ದೇಶ

ಪುದುಚೇರಿ: ಅಪಘಾತದಲ್ಲಿ ತಾತನ ಮೂಳೆ ಮುರಿತ; ರಸ್ತೆ ಗುಂಡಿಯನ್ನು ಮುಚ್ಚಿದ 8ನೇ ತರಗತಿ ಬಾಲಕ

ತನ್ನ ಪ್ರದೇಶದಲ್ಲಿನ ರಸ್ತೆಯ ಕರುಣಾಜನಕ ಸ್ಥಿತಿಯಲ್ಲಿ ಚಲಿಸಿದ ತನ್ನ ತಾತ ಮೋಟಾರ್‌ ಸೈಕಲ್‌ನಿಂದ ಬಿದ್ದು ಗಾಯಗೊಂಡಿದ್ದಕ್ಕೆ ಪುದುಚೇರಿಯಲ್ಲಿ 8ನೇ ತರಗತಿಯ ವಿದ್ಯಾರ್ಥಿಯು ಅಪಘಾತಕ್ಕೆ ಕಾರಣವಾಗಿದ್ದ ರಸ್ತೆ ಗುಂಡಿಯನ್ನು ಮುಚ್ಚಲು ಮುಂದಾದ ಘಟನೆ ನಡೆದಿದೆ. 

ಪುದುಚೆರಿ: ತನ್ನ ಪ್ರದೇಶದಲ್ಲಿನ ರಸ್ತೆಯ ಕರುಣಾಜನಕ ಸ್ಥಿತಿಯಲ್ಲಿ ಚಲಿಸಿದ ತನ್ನ ತಾತ ಮೋಟಾರ್‌ ಸೈಕಲ್‌ನಿಂದ ಬಿದ್ದು ಗಾಯಗೊಂಡಿದ್ದಕ್ಕೆ ಪುದುಚೇರಿಯಲ್ಲಿ 8ನೇ ತರಗತಿಯ ವಿದ್ಯಾರ್ಥಿಯು ಅಪಘಾತಕ್ಕೆ ಕಾರಣವಾಗಿದ್ದ ರಸ್ತೆ ಗುಂಡಿಯನ್ನು ಮುಚ್ಚಲು ಮುಂದಾದ ಘಟನೆ ನಡೆದಿದೆ. 

ರೈತರಾಗಿರುವ ತನ್ನ ತಾತ, ಕೆಲವು ದಿನಗಳ ಹಿಂದೆ ಮೋಟಾರ್ ಸೈಕಲ್‌ನಿಂದ ಬಿದ್ದು ಗುಂಡಿಗೆ ಬಿದ್ದು ಮೂಳೆ ಮುರಿತದಿಂದಾಗಿ ಆಸ್ಪತ್ರೆಗೆ ಸೇರಿದ್ದರು. ಇದರಿಂದ ನೋವಿಗೀಡಾದ 13 ವರ್ಷದ ಮಾಸಿಲಮಣಿ ತನ್ನ ಗ್ರಾಮದ ವಿವಿಧೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮರಳು, ಜಲ್ಲಿ ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿದ್ದಾನೆ. ಅವುಗಳನ್ನು ಸಿಮೆಂಟ್‌ನೊಂದಿಗೆ ಬೆರೆಸಿ ಪಕ್ಕದ ವಿಲಿಯನೂರ್‌ನ ಸೇಂಧನಾಥಂನಲ್ಲಿ ರಸ್ತೆಯ ಹೊಂಡ ಮತ್ತು ಇತರ ಹಾನಿಗೊಳಗಾದ ಭಾಗಗಳನ್ನು ತುಂಬಿದ್ದಾನೆ.

ಬಾಲಕನ ಕೆಲಸವನ್ನು ಮೆಚ್ಚಿ ನೀಡುತ್ತಿದ್ದ ಪುಸ್ತಕದ ಅಭಿನಂದನಾ ಪ್ರತಿಯನ್ನು ಸ್ವೀಕರಿಸಿ ಮಾತನಾಡಿದ ಬಾಲಕ, ನನ್ನ ತಾತನಂತೆ ಬೇರೆ ಯಾರೊಬ್ಬರೂ ಅಪಘಾತಕ್ಕೀಡಾಗಬಾರದು ಮತ್ತು ಗಾಯಗೊಳ್ಳಬಾರದು ಎಂಬುದು ನನ್ನ ಆಶಯ ಎಂದು ತಿಳಿಸಿದ್ದಾನೆ. 

ಬಾಲಕನನ್ನು ನೆರೆಹೊರೆಯವರು ಅಭಿನಂದಿಸಿ ಶಾಲು ಹೊದಿಸಿ ಗೌರವಿಸಿದರು.

ಪುದುಚೇರಿ-ಪತುಕಣ್ಣು ಮಾರ್ಗವು ಕಳೆದ ಏಳು ವರ್ಷಗಳಿಂದ ಹದಗೆಟ್ಟಿದೆ ಮತ್ತು ರಸ್ತೆಯನ್ನು ಸರಿಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ನಿವಾಸಿಯೊಬ್ಬರು ಬಾಲಕನನ್ನು ಭೇಟಿಯಾದ ನಂತರ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT