ದೇಶ

ಭಾರತದೊಂದಿಗೆ ಅನೌಪಚಾರಿಕ ಮಾತುಕತೆ ಇಲ್ಲ: ಪಾಕಿಸ್ತಾನ ಸಚಿವೆ 

Srinivas Rao BV

ನವದೆಹಲಿ: ಭಾರತದೊಂದಿಗೆ ಅನೌಪಚಾರಿಕ ಮಾತುಕತೆ ಇಲ್ಲ ಎಂದು ಪಾಕಿಸ್ತಾನ ಹೇಳಿದೆ. 

ಈಗಿನ ಪರಿಸ್ಥಿತಿಯಲ್ಲಿ ಅಂತಹ ಯಾವುದೇ ಬೆಳವಣಿಗೆಗಳೂ ನಡೆಯುತ್ತಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ರಾಜ್ಯ ಖಾತೆ ಸಚಿವೆ ಹೀನಾ ರಬ್ಬಾನಿ ಖರ್ ಸೆನೆಟ್ ಗೆ ಮಾಹಿತಿ ನೀಡಿದ್ದಾರೆ.

ಫಲಿತಾಂಶ-ಉದ್ದೇಶಿತವಾಗಿದ್ದಿದ್ದರೆ, ಅನೌಪಚಾರಿಕ ರಾಜತಾಂತ್ರಿಕತೆಗೆ ಅಪೇಕ್ಷಣೀಯವಾಗಿರುತ್ತಿತ್ತು ಎಂದು ವಿದೇಶಾಂಗ ಸಚಿವೆ ತಿಳಿಸಿದ್ದಾರೆ. 

ಪ್ರತ್ಯೇಕವಾಗಿ ವಿದೇಶಾಂಗ ಕಚೇರಿ ವಕ್ತಾರೆ ಮುಮ್ತಾಜ್ ಝಹ್ರಾ ಬಲೂಚ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಸಚಿವೆ ಖರ್ ಅವರ ಹೇಳಿಕೆಯನ್ನು ಪುನರುಚ್ಛರಿಸಿದ್ದು, ಭಾರತದೊಂದಿಗೆ ರಹಸ್ಯ ಮಾತುಕತೆಗಳಿಲ್ಲ ಎಂದು ಹೇಳಿದ್ದಾರೆ. 
    
"ಪ್ರದೇಶದಲ್ಲಿ ಶಾಂತಿ ನೆಲೆಸುವುದಕ್ಕೆ ಪಾಕಿಸ್ತಾನ ಎಂದಿಗೂ ಕ್ರಮಗಳನ್ನು ಕೈಗೊಂಡಿದೆ. ಆದರೆ ಗಡಿಯಾಚೆಗಿನ (ಭಾರತದ) ಹಗೆತನ ಬೇರೆಯದ್ದೇ ರೀತಿಯಲ್ಲಿತ್ತು. 

ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನ ಭಾರತದೊಂದಿಗಿನ ಸಂಬಂಧಗಳನ್ನು ಸಾಮಾನ್ಯಗೊಳಿಸುವುದಕ್ಕೆ ಸಲಹೆಗಳು ಬಂದಿತ್ತು. ಆದರೆ ಜಗತ್ತು ಭಾರತ ಪಾಕ್ ಗೆ ಕಳಿಸುತ್ತಿರುವ ಸಂದೇಶವನ್ನು ಗಮನಿಸಬೇಕು ಎಂದು ಹೀನಾ ರಬ್ಬಾನಿ ಖರ್ ಹೇಳಿದ್ದಾರೆ.

SCROLL FOR NEXT