ದೇಶ

74ನೇ ಗಣರಾಜ್ಯೋತ್ಸವ: ರಾಜಸ್ಥಾನಿ ಪೇಟ ತೊಟ್ಟ ಪ್ರಧಾನಿ ಮೋದಿ, ಇದರ ವಿಶೇಷತೆ ಏನು?

Manjula VN

ನವದೆಹಲಿ: 74ನೇ ಗಣರಾಜ್ಯೋತ್ಸವದ ನಿಮಿತ್ತ ನವದೆಹಲಿಯ ಕರ್ತವ್ಯಪಥಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉಡುಗೆಯ ಶೈಲಿ ಎಲ್ಲರನ್ನು ಆಕರ್ಷಿಸಿತು. ಅವರು ರಾಜಸ್ಥಾನಿ ಪೇಟ ಧರಿಸಿ ಆಗಮಿಸಿದ್ದು, ವಿಶೇಷವಾಗಿತ್ತು.

ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ಗುರುವಾರದ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸಿದ ಮೋದಿ ಅವರು. ಮೋದಿಯವರು ಭಾರತದ ವೈವಿಧ್ಯತೆಯನ್ನು ಸಂಕೇತಿಸುವ ಬಹುವರ್ಣದ ರಾಜಸ್ಥಾನಿ ಪೇಟವನ್ನು ಧರಿಸಿದ್ದರು. ಜೊತೆಗೆ, ಕೆನೆ ಬಣ್ಣದ ಕುರ್ತಾ ಮತ್ತು ಬಿಳಿ ಶಾಲು ಧರಿಸಿದ್ದರು. ಪರೇಡ್'ಗೂ ಮುನ್ನ ಮೋದಿಯವರು ಯುದ್ಧ ಸ್ಮಾರಕವನ್ನು ತಲುಪಿದಾಗ ಅವರ ಈ ವರ್ಷದ ಉಡುಗೆಯ ಮೊದಲ ನೋಟವು ಎಲ್ಲರ ಗಮನ ಸೆಳೆಯಿತು.

ಬಿಳಿ ಕುರ್ತಾ ಮತ್ತು ಕಪ್ಪು ಕೋಟ್, ಪ್ಯಾಂಟ್ ಧರಿಸಿರುವ ಪ್ರಧಾನಿ ಮೋದಿ ಬಿಳಿ ಸ್ಟೋಲ್ ಧರಿಸಿದ್ದರು. ಕಪ್ಪು ಮತ್ತು ಬಿಳಿ ಉಡುಗೆ ಜೊತೆ ಬಹುವರ್ಣದ ಪೇಟವು ಅವರ ಲುಕ್​ ಅನ್ನು ಹೆಚ್ಚಿಸಿತ್ತು.

ಕಳೆದ ವರ್ಷ, ಉತ್ತರಾಖಂಡ್‌ನಿಂದ ಬ್ರಹ್ಮಕಮಲ್ ಕ್ಯಾಪ್ ಧರಿಸಿ ಮಣಿಪುರದಿಂದ ಲಿರಂ ಫೈ ತೊಟ್ಟಿದ್ದರು, ಪ್ರಧಾನಿ ಮೋದಿ ಅವರ ಉಡುಗೆಯು ಉತ್ತರಾಖಂಡ ಮತ್ತು ಮಣಿಪುರದ ವಿಶಿಷ್ಟ ಸ್ಪರ್ಶವನ್ನು ಹೊಂದಿತ್ತು.

ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದ ಎರಡು ಸಂದರ್ಭಗಳಲ್ಲಿ ಪಿಎಂ ಮೋದಿಯವರ ಉಡುಗೆ ಆಯ್ಕೆಯ ಹೆಚ್ಚಿನ ಕುತೂಹಲ ಮೂಡುತ್ತದೆ. ಪ್ರಧಾನಿ ಮೋದಿ ಅವರು ನಿರ್ದಿಷ್ಟ ಬುಡಕಟ್ಟು ಅಥವಾ ಪ್ರದೇಶದ ಸಾಂಪ್ರದಾಯಿಕ ಬಟ್ಟೆಗಳನ್ನು ಇತರ ಸಂದರ್ಭಗಳಲ್ಲಿಯೂ ಧರಿಸುತ್ತಾರೆ.

2022 ರ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿಯವರ ಪೇಟದಲ್ಲಿ ತ್ರಿವರ್ಣ ಧ್ವಜದ ಒಂದು ನೋಟ ಕಂಡುಬಂದಿತ್ತು. ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಈ ಪೇಟ ಆಕರ್ಷಣೆಯ ಕೇಂದ್ರವಾಗಿತ್ತು. ಈ ಬಾರಿ ಅವರು ವಿಶೇಷ ಬಹುವರ್ಣದ ರಾಜಸ್ಥಾನಿ ಪೇಟದೊಂದಿಗೆ ಜನರ ಮನ ಗೆದ್ದಿದ್ದಾರೆ.

SCROLL FOR NEXT