ದೇಶ

ಮುಂಬೈ: ವಿದ್ಯಾರ್ಥಿಗಳಿಂದ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ಟಿಐಎಸ್ಎಸ್ ನಲ್ಲಿ ಪರಿಸ್ಥಿತಿ ಉದ್ವಿಗ್ನ

Srinivas Rao BV

ಮುಂಬೈ: ವಿದ್ಯಾರ್ಥಿಗಳು ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಮುಂಬೈ ನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. 

ಮುಂಬೈ ನ ಟಿಐಎಸ್ಎಸ್ ನಲ್ಲಿ ವಿದ್ಯಾರ್ಥಿಗಳ ಸಮೂಹ, ಆಡಳಿತ ಮಂಡಳಿ ನೀಡಿದ ಸಲಹೆ ಸೂಚನೆಗಳನ್ನು ಗಾಳಿಗೆ ತೂರಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಬಿಬಿಸಿ ಡಾಕ್ಯುಮೆಂಟರಿಯನ್ನು ಲ್ಯಾಪ್ ಟಾಪ್ ಹಾಗೂ ಮೊಬೈಲ್ ಫೋನ್ ಗಳಲ್ಲಿ ಶನಿವಾರ ವೀಕ್ಷಿಸಿದ್ದಾರೆ.
 
ಟಿಐಎಸ್ಎಸ್ ನ ಪ್ರೋಗ್ರೆಸೀವ್ ಸ್ಟೂಡೆಂಟ್ಸ್ ವೇದಿಕೆ ಈ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಏರ್ಪಡಿಸಿತ್ತು. ಬಿಜೆಪಿಯ ಭಾರತೀಯ ಜನತಾ ಯುವ ಮೋರ್ಚದ ಕಾರ್ಯಕರ್ತರು ವಿವಿ ಕ್ಯಾಂಪಸ್ ನಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸಿದ್ದರ ವಿರುದ್ಧ ಪ್ರತಿಭಟನೆ ನಡೆಸಿದರು. ಬಿಜೆಪಿ ಶಾಸಕ ಆಶೀಶ್ ಶೆಲರ್ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಶಾಂತಿ ಹಾಗೂ ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ರೀತಿಯ ಚಟುವಟಿಕೆ ವಿರುದ್ಧ ಎಚ್ಚರಿಕೆ ನೀಡಿತ್ತು. ಬಿಬಿಸಿ ಡಾಕ್ಯುಮೆಂಟರಿ ವಿರುದ್ಧ ಕೇಂದ್ರ ಸರ್ಕಾರ ಟ್ವೀಟರ್ ಹಾಗೂ ಯೂಟ್ಯೂಬ್ ಗಳಿಗೆ ನಿರ್ದೇಶನ ನೀಡಲು ಐಟಿ ರೂಲ್ಸ್, 2021 ನ್ನು ಜಾರಿಗೊಳಿಸಿದೆ.

SCROLL FOR NEXT