ದೇಶ

ಈಗ ದೆಹಲಿ ವಿವಿಯ ಮೊಘಲ್ ಗಾರ್ಡನ್‌ಗೆ ಬುದ್ಧನ ಹೆಸರು

Lingaraj Badiger

ನವದೆಹಲಿ: ಇತ್ತೀಚಿಗಷ್ಟೇ ರಾಷ್ಟ್ರಪತಿ ಭವನದಲ್ಲಿರುವ ಜನಪ್ರಿಯ ಮೊಘಲ್ ಗಾರ್ಡನ್ ಗೆ ಅಮೃತ್ ಉದ್ಯಾನ್ ಎಂದು ಮರುನಾಮಕರಣ ಮಾಡಲಾಗಿತ್ತು. ಈಗ ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್‌ನಲ್ಲಿರುವ ಮೊಘಲ್ ಗಾರ್ಡನ್ ಗೂ ಮರುನಾಮಕರಣ ಮಾಡಲಾಗಿದ್ದು, 'ಗೌತಮ್ ಬುದ್ಧ ಶತಮಾನೋತ್ಸವ ಗಾರ್ಡನ್' ಎಂದು ಹೆಸರಿಡಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ರಾಷ್ಟ್ರಪತಿ ಭವನವೂ ಕಳೆದ ಶನಿವಾರ ತನ್ನ ಪ್ರಸಿದ್ಧ ಮೊಘಲ್ ಗಾರ್ಡನ್ ಹೆಸರನ್ನು 'ಅಮೃತ್ ಉದ್ಯಾನ್' ಎಂದು ಬದಲಾಯಿಸಿತ್ತು.

ಹೆಸರು ಹೇಳಲು ಇಚ್ಛಿಸದ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು, ಮೊಘಲ್ ಗಾರ್ಡನ್‌ ಹೆಸರು ಬದಲಾವಣೆ ಕಾಕತಾಳೀಯ ಅಷ್ಟೇ. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಉದ್ಯಾನ ಸಮಿತಿಯೊಂದಿಗೆ ಸುದೀರ್ಘ ಚರ್ಚಿಸಿದ ನಂತರ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಿದ್ದಾರೆ.

"ಉದ್ಯಾನದಲ್ಲಿ ಗೌತಮ ಬುದ್ಧನ ಪ್ರತಿಮೆ ಇರುವುದರಿಂದ ದೆಹಲಿ ವಿಶ್ವವಿದ್ಯಾಲಯದ ಸಕ್ಷಮ ಪ್ರಾಧಿಕಾರವು ಉದ್ಯಾನದ ಹೆಸರನ್ನು ಗೌತಮ್ ಬುದ್ಧ ಸೆಂಟಿನರಿ ಗಾರ್ಡನ್ ಎಂದು ಅನುಮೋದಿಸಿದೆ" ಎಂದು ರಿಜಿಸ್ಟ್ರಾರ್ ವಿಕಾಸ್ ಗುಪ್ತಾ ಜನವರಿ 27 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಗೌತಮ ಬುದ್ಧನ ಪ್ರತಿಮೆಯು ಉದ್ಯಾನದಲ್ಲಿ ಕನಿಷ್ಠ 15 ವರ್ಷಗಳಿಂದ ಇದೆ.

ಈ ಉದ್ಯಾನವನ್ನು ಮೊಘಲರು ನಿರ್ಮಿಸಿಲ್ಲ ಅಥವಾ ಮೊಘಲ್ ಉದ್ಯಾನ ವಿನ್ಯಾಸವನ್ನು ಹೊಂದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

SCROLL FOR NEXT