ದೇಶ

2022-23 ರಲ್ಲಿ ಆರೋಗ್ಯ ಕ್ಷೇತ್ರದ ಮೇಲೆ ಭಾರತದ ಜಿಡಿಪಿಯ ಶೇ.2.1 ರಷ್ಟು ಖರ್ಚು

Srinivas Rao BV

ನವದೆಹಲಿ: ಕಳೆದ ವರ್ಷದ ಆರೋಗ್ಯ ಬಜೆಟ್ 2021 ರಲ್ಲಿದ್ದ ಶೇ.1.6 ರಷ್ಟಕ್ಕಿಂತಲೂ ಹೆಚ್ಚಾಗಿರುವುದು ಆರ್ಥಿಕ ಸಮೀಕ್ಷೆ ವರದಿಯ ಮೂಲಕ ತಿಳಿದುಬಂದಿದೆ.

2022-23 ನೇ ಸಾಲಿನಲ್ಲಿ ಆರೋಗ್ಯ ಬಜೆಟ್ ಶೇ.2 ನ್ನು ದಾಟಿದ್ದು, ಕೇಂದ್ರ ಹಾಗೂ ರಾಜ್ಯಗಳ ಆರೋಗ್ಯ ಕ್ಷೇತ್ರದ ಮೇಲಿನ ಖರ್ಚು 2025 ರ ವೇಳೆಗೆ ಒಟ್ಟಾಗಿ 2.5 ರಷ್ಟಾಗಬೇಕು ಎಂಬ ಸಲಹೆಯನ್ನು ಆರ್ಥಿಕ ಸಮೀಕ್ಷೆ ವರದಿ ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕ ದೇಶಕ್ಕೆ ಹಿಂದೆಂದೂ ಕಾಣದ ಸವಾಲನ್ನು ತಂದೊಡ್ಡಿತ್ತು. ಭಾರತ ಅದನ್ನು ಸಮರ್ಥವಾಗಿ ಎದುರಿಸಿದೆ ಎಂದು ಸಮೀಕ್ಷೆ ವರದಿಯಲ್ಲಿ ಹೇಳಿದೆ.

ಸಾಂಕ್ರಾಮಿಕ ಎದುರಾದ ಎರಡು ವರ್ಷಗಳಲ್ಲಿ ಸರ್ಕಾರ ಸೋಂಕು ಪ್ರಕರಣಗಳನ್ನು ನಿಭಾಯಿಸಲು ಹಾಗೂ ಆರ್ಥಿಕತೆಯ ಪುನಶ್ಚೇತನದ ಸಮತೋಲನ ಕಾಯ್ದುಕೊಳ್ಳಲು ಅನೇಕ ಆರ್ಥಿಕ ಮತ್ತು ಸಾಮಾಜಿಕ ಕ್ರಮಗಳನ್ನು ಕೈಗೊಂಡಿದೆ. ಈ ಪೈಕಿ ಭೌತಿಕ ಹಾಗೂ ಡಿಜಿಟಲ್ ಆರೋಗ್ಯ ಮೂಲಸೌಕರ್ಯ ಹೆಚ್ಚಿಸುವುದು, ಆರೋಗ್ಯ ಸಿಬ್ಬಂದಿಗಳಿಗೆ ಹೆಚ್ಚಿನ ತರಬೇತಿಯನ್ನು ಕಲ್ಪಿಸುವುದು ಹಾಗೂ ಬೃಹತ್ ಲಸಿಕಾ ಅಭಿಯಾನವೂ ಸೇರಿದೆ ಎಂದು ನಿರ್ಮಲಾ ಸೀತಾರಾಮನ್ ಮಂಡಿಸಿರುವ ವರದಿಯಲ್ಲಿ ಹೇಳಲಾಗಿದೆ.

220 ಕೋಟಿ ಲಸಿಕೆಯನ್ನು ನೀಡಲು ಸಾಧ್ಯವಾಗಿದ್ದು ಕೋವಿನ್ ನ ಡಿಜಿಟಲ್ ಮೂಲಸೌಕರ್ಯ ಮೂಲಕವಾಗಿದೆ ಎಂದು ಹೇಳಿರುವ ವರದಿ,  2030 ರ ವೇಳೆಗೆ ಫಾರ್ಮಾ ಕ್ಷೇತ್ರ 130 ಬಿಲಿಯನ್ ಡಾಲರ್ ಗೆ ತಲುಪಲಿದೆ, ಪ್ಯಾಂಡಮಿಕ್ ನಂತರ ಫಾರ್ಮಾ ಸಂಸ್ಥೆ ಬೆಳವಣಿಗೆ ಸ್ಥಿರವಾಗಿದೆ ಎಂದು ಸಮೀಕ್ಷೆ ಹೇಳಿದೆ.

SCROLL FOR NEXT