ಸುಟ್ಟು ಭಸ್ಮವಾಗಿರುವ ಬಸ್. 
ದೇಶ

ಕಿಟಕಿ ಒಡೆದು ಹೊರಗೆ ಜಿಗಿದೆವು: ದುರಂತ ಸ್ಮರಿಸಿದ ಬದುಕುಳಿದ ಪ್ರಯಾಣಿಕರು

ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಿಂಧಖೇಡ್ರಾಜ ಬಳಿ ಸಮೃದ್ಧಿ ಎಕ್ಸ್‌ಪ್ರೆಸ್‌ವೇನಲ್ಲಿ ಬಸ್​ ಬೆಂಕಿಗಾಹುತಿಯಾಗಿ 26 ಪ್ರಯಾಣಿಕರು ಸಜೀವ ದಹನಗೊಂಡಿದ್ದು, ದುರ್ಘಟನೆಯಲ್ಲಿ ಪಾರಾದ 7 ಮಂದಿ ಪ್ರಯಾಣಿಕರು ದುರಂತವನ್ನು ಸ್ಮರಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಿಂಧಖೇಡ್ರಾಜ ಬಳಿ ಸಮೃದ್ಧಿ ಎಕ್ಸ್‌ಪ್ರೆಸ್‌ವೇನಲ್ಲಿ ಬಸ್​ ಬೆಂಕಿಗಾಹುತಿಯಾಗಿ 26 ಪ್ರಯಾಣಿಕರು ಸಜೀವ ದಹನಗೊಂಡಿದ್ದು, ದುರ್ಘಟನೆಯಲ್ಲಿ ಪಾರಾದ 7 ಮಂದಿ ಪ್ರಯಾಣಿಕರು ದುರಂತವನ್ನು ಸ್ಮರಿಸಿದ್ದಾರೆ.

ಬಸ್​ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ನಾವು ಬಸ್​​ನ ಕಿಟಕಿ ಒಡೆದುಕೊಂಡು, ಹೊರಗೆ ಹಾರಿ ಜೀವ ಉಳಿಸಿಕೊಂಡೆವು. ಆದರೆ, ಎಲ್ಲರಿಗೂ ಅದು ಸಾಧ್ಯವಾಗಲಿಲ್ಲ. ಬಸ್ ಟೈಲ್ ಸ್ಫೋಟಗೊಂಡು ಬಸ್'ಗೆ ಬೆಂಕಿ ಹೊತ್ತಿಕೊಂಡಿದ್ದು. ಕೆಲವೇ ಕ್ಷಣಗಳಲ್ಲಿ ಬೆಂಕಿ ಬಸ್ ಸುತ್ತಲೂ ಆವರಿಸಿಕೊಂಡಿತ್ತು ಎಂದು ಹೇಳಿದ್ದಾರೆ.

ಬೆಂಕಿ ಹೊತ್ತಿಕೊಂಡ ಕೆಲವೇ ನಿಮಿಷಗಳಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಬಂದಿದ್ದರು ಎಂದು ತಿಳಿಸಿದ್ದಾರೆ.

4-5 ಪ್ರಯಾಣಿಕರು ಬಸ್ ನಿಂದ ಹೊರಗೆ ಹಾರಿದ್ದರು. ಆದರೆ, ಎಲ್ಲರಿಗೂ ಅದು ಸಾಧ್ಯವಾಗಲಿಲ್ಲ. ಬಸ್ ನಿಂದ ಕಳೆಗೆ ಹಾರಿದ ಕೆಲವರು ರಸ್ತೆಯಲ್ಲಿ ತೆರಳುತ್ತಿದ್ದ ಇತರೆ ವಾಹನಗಳಿಂದ ಸಹಾಯಕ್ಕೆ ಅಂಗಲಾಚುತ್ತಿದ್ದರು. ಆದರೆ, ಯಾರೊಬ್ಬರೂ ವಾಹನವನ್ನು ನಿಲ್ಲಿಸಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಮಾರ್ಗದಲ್ಲಿ ಅನೇಕ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಈ ಸಂದರ್ಭದಲ್ಲಿ ಸಹಾಯಕ್ಕೆ ನಾವು ಧಾವಿಸುತ್ತೇವೆ. ಈ ಘಟನೆಯು ಭೀಕರವಾಗಿತ್ತು. ಬಸ್ ಟೈರ್ ಗಳು ಒಡೆದು ಹೋಗಿದ್ದವು. ಒಳಗಿದ್ದ ಜನರು ಕಿಟಕಿ ಒಡೆಯಲು ಪ್ರಯತ್ನಿಸುತ್ತಿದ್ದರು. ಹಲವರು ಸಜೀವ ದಹನವಾಗುತ್ತಿದ್ದುದ್ದು ಭಯಾನಕವಾಗಿದ್ದು. ಬೆಂಕಿಯ ಕೆನ್ನಾಲಿಗೆ ಬಹಳ ತೀವ್ರವಾಗಿತ್ತು. ಈ ವೇಳೆ ಅವರನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಇದು ಬಹಳ ನೋವು ತರಿಸಿತು. ಬದುಕುಳಿದ 8 ಮಂದಿಯನ್ನು ಹತ್ತಿದ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಿದೆವು ಎಂದು ತಿಳಿಸಿದ್ದಾರೆ.

ನಾಗ್ಪುರದಿಂದ ಪುಣೆಗೆ ತೆರಳುತ್ತಿದ್ದ ಖಾಸಗಿ ಪ್ರಯಾಣಿಕ ಬಸ್ ಮಧ್ಯರಾತ್ರಿ 1:30 ರ ಸುಮಾರಿಗೆ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಬಸ್ಸಿನಲ್ಲಿ ಸುಮಾರು 33 ಪ್ರಯಾಣಿಕರು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲಿಗೆ ಬಸ್‌ನ ಟೈರ್ ಸ್ಫೋಟಗೊಂಡಿದ್ದು, ನಂತರ ಬಸ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್'ಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಘಟನೆಯಲ್ಲಿ 25 ಮಂದಿ ಸಾವನ್ನಪ್ಪಿ, 8 ಮಂದಿ ಗಾಯಗೊಂಡಿದ್ದರು. 8 ಮಂದಿ ಗಾಯಾಳುಗಳ ಪೈಕಿ ಇದೀಗ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇದರೊಂದಿಗೆ ಘಟನೆಯಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ನಾವು ಕೈ ಜೋಡಿಸೋಣ": ಗಲ್ವಾನ್ ಸಂಘರ್ಷದ ಬಳಿಕ ಮೊದಲ ಮಾತುಕತೆ ವೇಳೆ Narendra Modi ಗೆ Xi Jinping ಸಂದೇಶ; ಭಾರತದೆದುರು ಮಂಡಿಯೂರಿದ ಚೀನಾ?

ಪ್ರಶ್ನೆ ಪತ್ರಿಕೆ ಸೋರಿಕೆ ಸಹಿಸಲ್ಲ: KPSC ವಿರುದ್ಧ ಹೋರಾಟಕ್ಕೆ CJP ಎಂಟ್ರಿ: ನೊಂದ ಅಭ್ಯರ್ಥಿಗಳಿಗೆ ನ್ಯಾಯದ ಭರವಸೆ

ಮೈಸೂರಿನ 'ಪೇಟೆ ರೌಡಿ' ಪೊಲೀಸ್ ಠಾಣೆಗೆ ನುಗ್ಗಿದ್ರೆ ನಾನು ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುತ್ತೇನೆ: ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನ್

ಚೀನಾ ಇದ್ದರೂ ಬ್ರಿಕ್ಸ್‌ ಸದಸ್ಯತ್ವಕ್ಕಾಗಿ 3 ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ರೂ ಅವಕಾಶ ಸಿಕ್ಕಿಲ್ಲ: ಪಾಕ್ ಗೋಳಾಟ!

ಬಳ್ಳಾರಿ ನಂತರ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮತ್ತೊಂದು ಪಾದಯಾತ್ರೆ; ಸೆಪ್ಟೆಂಬರ್ 15 ರಿಂದ ರಾಜ್ಯಾದ್ಯಂತ ಹೋರಾಟ