ದೇಶ

ಕುನೋ ಅರಣ್ಯಕ್ಕೆ ಮತ್ತೊಂದು ಚೀತಾ ಬಿಡುಗಡೆ, ಒಟ್ಟು ಸಂಖ್ಯೆ 10ಕ್ಕೆ ಏರಿಕೆ!

Srinivasamurthy VN

ಭೋಪಾಲ್: ಚೀತಾ ಉಪಕ್ರಮದ ಅಡಿಯಲ್ಲಿ ಇಂದು ದೇಶಕ್ಕೆ ಆಗಮಿಸಿರುವ ಚೀತಾಗಳ ಪೈಕಿ ಮತ್ತೊಂದು ಚೀತಾವನ್ನು ಕುನೋ ಆರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿದೆ.

 ಪವನ್  ಎಂಬ ಗಂಡು ಚೀತಾವನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಇಂದು ಬಿಡುಗಡೆ ಮಾಡಲಾಯಿತು. ಆ ಮೂಲಕ ದೇಶದಲ್ಲಿ ಈ ವರೆಗೂ 10 ಚೀತಾಗಳನ್ನು ಕುನೋ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಶಿಯೋಪುರ ವಿಭಾಗೀಯ ಅರಣ್ಯಾಧಿಕಾರಿ ಪ್ರಕಾಶ್ ಕುಮಾರ್ ವರ್ಮಾ ಅವರು, ಗಂಡು ಚಿರತೆ ಪವನ್ ಅನ್ನು ತೆರೆದ ಅರಣ್ಯಕ್ಕೆ ಬಿಡಲಾಗಿದ್ದು, ಇಲ್ಲಿಯವರೆಗೆ 10 ಚೀತಾಗಳನ್ನು ತೆರೆದ ಅರಣ್ಯದಲ್ಲಿ ಬಿಡಲಾಗಿದೆ. ಎಲ್ಲಾ ಚೀತಾಗಳು ಆರೋಗ್ಯ ಮತ್ತು ಕುನೊ ರಾಷ್ಟ್ರೀಯ ಉದ್ಯಾನದ ಗಡಿಯಲ್ಲಿ ಮುಕ್ತವಾಗಿ ವಿಹರಿಸುತ್ತಿವೆ ಎಂದು ಹೇಳಿದ್ದಾರೆ.

ಪರಸ್ಪರ ಕಾಳಗ ಚೀತಾಗೆ ಗಾಯ
ಏತನ್ಮಧ್ಯೆ ಕುನೋ ರಾಷ್ಟ್ರೀಯ ಉದ್ಯಾನವನದ ತೆರೆದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡಿದ್ದ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದ ಚೀತಾಗಳ ನಡುವೆ ಕಾದಾಟ ನಡೆದಿದ್ದು, ಪರಿಣಾಮ ಆಫ್ರಿಕನ್ ಗಂಡು ಚೀತಾ ಅಗ್ನಿ ಗಾಯಗೊಂಡಿದೆ. ಕುನೋ ರಾಷ್ಟ್ರೀಯ ಉದ್ಯಾನವನದ ತೆರೆದ ಅರಣ್ಯ ಪ್ರದೇಶದಲ್ಲಿ ಎರಡು ಗುಂಪಿನ ಚೀತಾಗಳ ನಡುವೆ ಘರ್ಷಣೆ ನಡೆದ ಬಳಿಕ ಅಗ್ನಿ ಎಂಬ ಗಂಡು ಚೀತಾಗೆ ಗಾಯಗೊಂಡಿದೆ. ಗಾಯಗೊಂಡ ಅಗ್ನಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಸದ್ಯಕ್ಕೆ ಅದರ ಸ್ಥಿತಿ ಸುಧಾರಿಸಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
 

SCROLL FOR NEXT