ದೇಶ

ತೆಲಂಗಾಣ: ಹಳಿ ದಾಟುತ್ತಿದ್ದ ವೇಳೆ ರೈಲು ಹರಿದು 60 ಮೇಕೆಗಳು ಸಾವು

Ramyashree GN

ವಿಕಾರಾಬಾದ್: ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ರೈಲಿಗೆ ಸಿಲುಕಿ ಸುಮಾರು ಅರವತ್ತು ಮೇಕೆಗಳು ಸಾವಿಗೀಡಾಗಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ವಿಕಾರಾಬಾದ್ ಜಿಲ್ಲೆಯ ಧಾರೂರ್ ಮಂಡಲದಲ್ಲಿರುವ ಡೋರ್ನಾಲ್ ಗ್ರಾಮದಲ್ಲಿ ಮೇಕೆಗಳು ರೈಲು ಹಳಿ ದಾಟುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಮೇಕೆಗಳು ಕಿಷ್ಟಪ್ಪ ಎಂದು ಗುರುತಿಸಲಾದ ಕುರುಬನಿಗೆ ಸೇರಿವೆ.

ತರೂರ್ ಮಂಡಲದ ಡೋರ್ನಾಲ್ ಗ್ರಾಮದಲ್ಲಿ ಇಂದು ಹಳಿ ದಾಟುತ್ತಿದ್ದ ವೇಳೆ ಮೇಕೆಗಳಿಗೆ ರೈಲಿಗೆ ಡಿಕ್ಕಿ ಹೊಡೆದಿದ್ದು, 60 ಮೇಕೆಗಳು ಸ್ಥಳದಲ್ಲೇ ಸಾವಿಗೀಡಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

SCROLL FOR NEXT