ಸಾಂದರ್ಭಿಕ ಚಿತ್ರ 
ದೇಶ

ಉತ್ತರ ಪ್ರದೇಶ: ಪೊಲೀಸರ ಕಸ್ಟಡಿಯಲ್ಲಿದ್ದ 28 ವರ್ಷದ ಸಾಜಿದ್ ಅಬ್ಬಾಸಿ ಸಾವು!

28 ವರ್ಷದ ಕೂಲಿ ಕಾರ್ಮಿಕ ಸಾಜಿದ್ ಅಬ್ಬಾಸಿ ಎಂಬಾತ ಪೊಲೀಸರು ಥಳಿಸಿದ ಕಾರಣ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ.

ಲಖನೌ: 28 ವರ್ಷದ ಕೂಲಿ ಕಾರ್ಮಿಕ ಸಾಜಿದ್ ಅಬ್ಬಾಸಿ ಎಂಬಾತ ಪೊಲೀಸರು ಥಳಿಸಿದ ಕಾರಣ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ.

ಪಶ್ಚಿಮ ಯುಪಿಯ ಬಾಗ್‌ಪತ್ ಜಿಲ್ಲೆಯ ರತೌಲ್ ಗ್ರಾಮದ ಸಂತ್ರಸ್ತ, ಜೂಜಾಟದ ಶಂಕೆಯ ಮೇಲೆ ಆತನನ್ನು ಎತ್ತಿಕೊಂಡು ಬಂದ ಸ್ಥಳೀಯ ಪೊಲೀಸರು ಬಿಡುಗಡೆ ಮಾಡಿದ ಅರ್ಧ ಗಂಟೆಯ ನಂತರ ಸಾವನ್ನಪ್ಪಿದ್ದನು. ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ತನ್ನ ಮಗನನ್ನು ಪೊಲೀಸರು ಭೀಕರವಾಗಿ ಥಳಿಸಿದ್ದಾರೆ. ಬಿಡುಗಡೆ ವೇಳೆ ಆತನ ಸ್ಥಿತಿ ಗಂಭೀರವಾಗಿತ್ತು ಎಂದು ಸಾಜಿದ್ ತಂದೆ ಬಾಬು ಅಬ್ಬಾಸಿ ಹೇಳಿದ್ದಾರೆ.

ಮೂವರು ಪೊಲೀಸ್ ಪೇದೆಗಳು ಆತನನ್ನು ನಿರ್ದಯವಾಗಿ ಥಳಿಸುತ್ತಿರುವುದನ್ನು ಗ್ರಾಮಸ್ಥರು ಸಹ ನೋಡಿದ್ದಾರೆ ಎಂದು ತಂದೆ ಹೇಳಿದರು. ಸಾಜಿದ್ ನಿಧನದಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಸ್ತೆ ತಡೆ ನಡೆಸಿದರು.

ಮೃತನ ಕುಟುಂಬ ಮತ್ತು ಗ್ರಾಮಸ್ಥರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ಕೈಗೊಳ್ಳುವ ಭರವಸೆ ನೀಡಿದ ನಂತರ ಸಮಾಧಾನಗೊಂಡರು ಎಂದು ಬಾಗ್‌ಪತ್ ಎಸ್ ಪಿ ಅರ್ಪಿತ್ ವಿಜಯವರ್ಗಿಯ ಹೇಳಿದ್ದಾರೆ. 

ಜೂಜಾಟದ ಶಂಕೆಯ ಮೇರೆಗೆ ಆತನನ್ನು ಬಂಧಿಸಲಾಗಿತ್ತು ಆದರೆ ಆತನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ನಂತರ ಬಿಡುಗಡೆ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಕುಟುಂಬವು ಯಾವುದೇ ದೂರು ನೀಡದ ಕಾರಣ ಪ್ರಕರಣದಲ್ಲಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದದಾರೆ. ಘಟನೆಯ ಬಗ್ಗೆ ಈಗಾಗಲೇ ತನಿಖೆಯನ್ನು ಪ್ರಾರಂಭಿಸಲಾಗಿದೆ. ಶವಪರೀಕ್ಷೆಯ ನಂತರವೇ ಸಾವಿನ ಕಾರಣವನ್ನು ಸ್ಪಷ್ಟಪಡಿಸಲಾಗುವುದು ಎಂದು ಬಾಗ್‌ಪತ್ ಎಎಸ್ಪಿ ಮನೀಶ್ ಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT