ಸಾಂದರ್ಭಿಕ ಚಿತ್ರ 
ದೇಶ

ಬಂಗಾಳ ಚುನಾವಣೆ: 50:50 ಅನುಪಾತದಲ್ಲಿ ಎಲ್ಲಾ ಬೂತ್‌ಗಳಲ್ಲಿ ಕೇಂದ್ರ ಪಡೆ,  ಪೊಲೀಸರನ್ನು ನಿಯೋಜಿಸಿ: ಹೈಕೋರ್ಟ್

ರಾಜ್ಯ ಚುನಾವಣಾ ಆಯೋಗವು(ಎಸ್‌ಇಸಿ) ಅಧಿಸೂಚನೆ ಹೊರಡಿಸಿದ ಮೂರು ದಿನಗಳ ನಂತರ ಮತಗಟ್ಟೆಗಳಲ್ಲಿ ಕೇಂದ್ರೀಯ ಪಡೆಗಳನ್ನು ನಿಯೋಜಿಸಲಾಗುತ್ತಿದೆ. 

ಕೋಲ್ಕತ್ತಾ: ರಾಜ್ಯ ಚುನಾವಣಾ ಆಯೋಗವು (ಎಸ್‌ಇಸಿ) ಅಧಿಸೂಚನೆ ಹೊರಡಿಸಿದ ಮೂರು ದಿನಗಳ ನಂತರ ಮತಗಟ್ಟೆಗಳಲ್ಲಿ ಕೇಂದ್ರೀಯ ಪಡೆಗಳನ್ನು ನಿಯೋಜಿಸಲಾಗುತ್ತಿದೆ. 

ಕೋಲ್ಕತ್ತಾ ಹೈಕೋರ್ಟ್ ಮಂಗಳವಾರ ರಾಜ್ಯ ಚುನಾವಣಾ ಸಮಿತಿಗೆ ಕೇಂದ್ರ ಸಶಸ್ತ್ರ ಅರೆಸೇನಾ ಪಡೆ (ಸಿಎಪಿಎಫ್) ಸಿಬ್ಬಂದಿಯನ್ನು ನಿಯೋಜಿಸಲು ಸೂಚಿಸಿತ್ತು. ಜುಲೈ 8ರಂದು ಚುನಾವಣೆ ನಡೆಯಲಿದೆ. 

ವಿಚಾರಣೆಯ ಸಂದರ್ಭದಲ್ಲಿ, ಡೆಪ್ಯುಟಿ ಸಾಲಿಸಿಟರ್ ಜನರಲ್ ಬಿಲ್ವಾಡಲ್ ಭಟ್ಟಾಚಾರ್ಯ ಅವರು ತಮ್ಮ ಅರ್ಜಿಯಲ್ಲಿ ಕೇಂದ್ರ ಪಡೆಗಳಿಂದ ಸುಮಾರು 65,000 ಸಕ್ರಿಯ ಸಿಬ್ಬಂದಿ ಇರುತ್ತಾರೆ. ರಾಜ್ಯ ಪೊಲೀಸ್ ಪಡೆ ಸುಮಾರು 70,000 ಆಗಿರುತ್ತದೆ. ಆದ್ದರಿಂದ ಐವತ್ತು-ಐವತ್ತು ಅನುಪಾತದಲ್ಲಿ ನಿಯೋಜಿಸಲಾಗುವುದು ಎಂದು ಉಲ್ಲೇಖಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರ ವಿಭಾಗೀಯ ಪೀಠವು ಭಟ್ಟಾಚಾರ್ಯ ಅವರ ಸಲ್ಲಿಕೆಯನ್ನು ಎತ್ತಿಹಿಡಿದಿದೆ.

ಚುನಾವಣಾ ಸಮಿತಿಯೊಂದಿಗೆ ಲಭ್ಯವಿರುವ ಒಟ್ಟು ಪಡೆಗಳ ಸಂಖ್ಯೆಯನ್ನು ಆಧರಿಸಿ ಕೇಂದ್ರ ಮತ್ತು ರಾಜ್ಯ ಪಡೆಗಳ ನಿಯೋಜನೆಯ ಸೂತ್ರದ ಕುರಿತು ಸೂಕ್ತ ಆದೇಶವನ್ನು ರವಾನಿಸಲು ಎಸ್‌ಇಸಿ ಮನವಿ ನಂತರ ವಿಭಾಗೀಯ ಪೀಠವು ಈ ನಿರ್ದೇಶನವನ್ನು ಅಂಗೀಕರಿಸಿತು.

ಎಲ್ಲಾ 61,636 ಬೂತ್‌ಗಳಲ್ಲಿ ಕೇಂದ್ರ ಪಡೆ ಸಿಬ್ಬಂದಿಯನ್ನು ನಿಯೋಜಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸಿದ್ದವು.

ಏತನ್ಮಧ್ಯೆ, ಬಂಗಾಳದಲ್ಲಿ ಪಂಚಾಯತ್ ಚುನಾವಣೆ ಘೋಷಣೆಯಾದಾಗಿನಿಂದ ಕಳೆದ 26 ದಿನಗಳಲ್ಲಿ ಚುನಾವಣಾ ಸಂಬಂಧಿತ ಹಿಂಸಾಚಾರದಲ್ಲಿ 14 ಜನರು ಸಾವನ್ನಪ್ಪಿದ್ದರೂ, ಪಶ್ಚಿಮ ಬಂಗಾಳದ ಪೊಲೀಸ್ ಮುಖ್ಯಸ್ಥರು ಮಂಗಳವಾರ ರಾಜ್ಯ ಮತ್ತು ಪೊಲೀಸರಲ್ಲಿ 'ಎರಡರಿಂದ ಮೂರು' ಹಿಂಸಾಚಾರದ ಘಟನೆಗಳು ನಡೆದಿವೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT