ಸಾಂದರ್ಭಿಕ ಚಿತ್ರ 
ದೇಶ

ಟೆಂಪೋ- ಕಾರು ಭೀಕರ ರಸ್ತೆ ಅಪಘಾತ: ಪತಿ, ಪತ್ನಿ, ಮಗ ಸೇರಿ 6 ಮಂದಿ ಸಾವು, ಹಲವರಿಗೆ ಗಾಯ

ಆಗ್ರಾ ಜಿಲ್ಲೆಯ ಖೇರಗಢ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಸೈಯಾನ್​- ಖೇರಗಢ ರಸ್ತೆಯಲ್ಲಿ ಟೆಂಪೋ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಆಗ್ರಾ: ಆಗ್ರಾ ಜಿಲ್ಲೆಯ ಖೇರಗಢ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಸೈಯಾನ್​- ಖೇರಗಢ ರಸ್ತೆಯಲ್ಲಿ ಟೆಂಪೋ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಟೆಂಪೋದಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರು ಚಾಲಕ ಪರಾರಿಯಾಗಿದ್ದು ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ 11.30ರ ಸುಮಾರಿಗೆ ಹತ್ತು ಮಂದಿ ಇದ್ದ ಟೆಂಪೋ ಸೈಯಾನ್​ನಿಂದ ಖೇರಗಡಕ್ಕೆ ಹೋಗುತ್ತಿತ್ತು. ಈ ವೇಳೆ ಎದುರಿನಿಂದ ಬಂದ ಕಾರು ಟೆಂಪೋಗೆ ಡಿಕ್ಕಿ ಹೊಡೆದಿದೆ.

ಖೇರಗಢ ಪೊಲೀಸ್ ಠಾಣೆ ವ್ಯಾಪ್ತಿಯ ನಾಗಲಾ ಉದಯ ಗ್ರಾಮದ ನಿವಾಸಿ ಟೆಂಪೋ ಸವಾರ ಜಯಪ್ರಕಾಶ್, ಪತ್ನಿ ಬ್ರಜೇಶ್ದೇವಿ, 12 ವರ್ಷದ ಮಗ ಸುಮಿತ್ ಹಾಗು ವೃದ್ಧ ಬ್ರಜ್ ಮೋಹನ್ ಶರ್ಮಾ, ಟೆಂಪೋ ಚಾಲಕ ಭೋಲಾ ನಿವಾಸಿ ಅಯೆಲಾ ಮತ್ತು ಖೇರಗಢದ ಮನೋಜ್ (30) ಎಂಬವರು ಸಾವನ್ನಪ್ಪಿದ್ದಾರೆ.

ಇನ್ನುಳಿದ ನಾಲ್ವರು ಗಾಯಾಳುಗಳಿಗೆ ಎಸ್‌.ಎನ್. ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಖೇರಗಢ ಎಸಿಪಿ ಮಹೇಶ್ ಕುಮಾರ್ ಮಾಹಿತಿ ನೀಡಿದರು.

ಕಾರು ಚಾಲಕ ಬಂಟಿ ಹಾಗು ಆತನ ಗೆಳೆಯರಾದ ಪಿಂಕು ಮತ್ತು ಬನಿಯಾ ಎಂಬವರೊಂದಿಗೆ ಖೇರಘರ್‌ನಲ್ಲಿ ಸಂತೋಷ ಕೂಟ ಆಯೋಜಿಸಿದ್ದನಂತೆ. ಇದಾದ ನಂತರ ಬಂಟಿ ಇಬ್ಬರನ್ನೂ ಹಳ್ಳಿಯಲ್ಲಿ ಬಿಟ್ಟು ಕಾರಿನಲ್ಲಿ ಮನೆಗೆ ಬರುತ್ತಿದ್ದ. ಚಾಲಕ ಬಂಟಿ ಪಾನಮತ್ತನಾದ್ದರಿಂದ ಘಟನೆ ಸಂಭವಿಸಿದೆ. ಪಿಂಕು ಮತ್ತು ಬನಿಯಾ ಎಂಬಿಬ್ಬರನ್ನು ಬಂಧಿಸಲಾಗಿದೆ. ಕಾರು ಚಾಲಕನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್